ಬಾಯಿ ಆರೋಗ್ಯ ಮತ್ತು ದಂತ ಆರೋಗ್ಯಕರ ಜೀವನ ನಡೆಸಲು ಎಲ್ಲರೂ ಕೈ ಜೋಡಿಸಿ

0
202

ಕಲಬುರಗ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಎನ್. ಓ. ಹೆಚ್. ಪಿ.ಕಾರ್ಯಕ್ರಮ ಕಲಬುರಗಿ . ಬಾಲಕಿಯರ ಬಾಲ ಮಂದಿರ ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ

ನಗರ ಬಾಲಕಿಯರ ಬಾಲ ಮಂದಿರ ಆಳಂದ ಕಾಲೋನಿ ಸಂಭಾಗದಲ್ಲಿ. ವಿಶ್ವ ಬಾಯಿ ಆರೋಗ್ಯ ದಿನಮತ್ತು ಬಾಯಿ ಅರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಂಡು

Contact Your\'s Advertisement; 9902492681

ಮೊದಲಿಗೆ ಉಪ ನಿರ್ದೇಶಕರು ,, ವಿಭಾಗೀಯ ಸಹ ನಿರ್ದೇಶಕರ ಕಾರ್ಯಾಲಯ ಅಕುಕ ಸೇವೆಗಳು ಕಲಬುರಗಿಯಡಾ. ಶರಣಬಸಪ್ಪ ಗಣಜಲ್ ಖೆಡ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಾ, ವಿಶ್ವ ಬಾಯಿ ಆರೋಗ್ಯಮತ್ತು ದಂತ ಚಿಕಿತ್ಸಾ ಕಾರ್ಯಕ್ರಮವು ಬಹಳ ಮುಖ್ಯವಾದದ್ದು ಮಕ್ಕಳಿಂದು ಹಿಡಿದು ದೊಡ್ಡವರು ತನಕ ನಮ್ಮ ಬಾಯಿ ಮತ್ತು ದಂತ ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದರೆ ನಮ್ಮ ಆರೋಗ್ಯ ಹದಗೆಡುತ್ತದೆ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ, ಯಾವ ರೀತಿ ಸಂರಕ್ಷಿಸಿಕೊಳ್ಳಬೇಕು ಎಂದರೆ ಬಾಯಿ ಆರೋಗ್ಯ ಎಷ್ಟು ಮುಖ್ಯ ಅಷ್ಟೇ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ದಿನ ನಿತ್ಯ ನಾವು ಬೆಳಗ್ಗೆ ಮಾಡುವ ಕಾರ್ಯವಾಗಿದೆ. ” ಹೆಲ್ದಿ ಮೌತ್ ಹೆಲ್ದಿ ಬಾಡಿ ” ಪೋಷಣೆ ನಮ್ಮ ದೇಹ್ಯ ವ್ಯಾಖ್ಯಾ ವಾಗಿ ರೂಢಿಸಿಕೊಳ್ಳೇಕು.ನಮ್ಮ ದೇಹ ಚೆನ್ನಾಗಿರುವುದರ ಜೊತೆಗೆ ಮುಖ್ಯವಾಗಿ ಊಟ ಮಾಡಲು ಚೆನ್ನಾಗಿ ಉಸಿರಾಟ ಅಡಲು ಮಾತನಾಡುವ ಸಮಯದಲ್ಲಿ ಈ ಮೂರು ಕಾರ್ಯಗಳು ಚೆನ್ನಾಗಿದರೆ.

ಮಾತ್ರ ನಮ್ಮದೇಹದ ಆರೋಗ್ಯ ಚೆನ್ನಾಗಿಡಲು ಸಾಧ್ಯ. ನಮ್ಮೆಲ್ಲರ ಜವಾಬ್ದಾರಿ ಅಗಿದೆ. ಹತ್ತು ಹನ್ನೆರಡು ವರ್ಷಗಳಿಂದ ವಿಶ್ವ ಬಾಯಿ ಆರೋಗ್ಯಮತ್ತು ದಂತ ಚಿಕಿತ್ಸಾ ಕಾರ್ಯಕ್ರಮದ ಜೊತೆಗೆ ಘೋಷಣೆ ಬಾಯಿ ಆರೋಗ್ಯ ಜಾಗೃತಿ ಮೂಡಿಸುವ ಜವಬ್ದಾರಿ ನಮ್ಮ ಆರೋಗ್ಯ ಇಲಾಖೆ ಹಮ್ಮಿಕೊಂಡು ತಪಾಸಣೆ ಮಾಡಲಾಗುತ್ತಿದೆ ಇದರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವುದು ಮತ್ತು ಬಾಯಿ ಅರೋಗ್ಯ ಮತ್ತು ದಂತ ಆರೋಗ್ಯ ಕಾಪಾಡಿಕೊಂಡು ಬರುವುದರ ಜೊತೆಗೆ ನಮ್ಮ ಸಂಪರ್ಕದಲ್ಲಿ ಇರುವ ನಮ್ಮ ಮನೆಯ ಸದಸ್ಯರು ಮತ್ತು ಸ್ನೇಹಿತರು, ನಮ್ಮ ಸಹೋದ್ಯೋಗಿ ಇರಬಹುದು ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲಾರುಜೋಡಿಸಬೆಕೆಂದು ಸಲಹೆ ನೀಡಿದರು.

ಮೊದಲಿಗೆ ಜಿಲ್ಲಾಎನ್ ಓ ಹೆಚ್ ಪಿ ಕಾರ್ಯಕ್ರಮಧಿಕಾರಿಗಳು ಡಾ. ಸಂಧ್ಯಾ ಡಾಂಗೆ ಅವರು ವಿಶ್ವ ಬಾಯಿ ಆರೋಗ್ಯ ಮತ್ತುದಂತ ಶಿಬಿರ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಅಡಿದರು.

ವೇದಿಕೆ ಮೇಲೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದಡಿ ಹೆಚ್ ಓ.ಡಾ. ರತಿಕಾಂತ ವಿ ಸ್ವಾಮಿ . ಅರ್ ಸಿ ಹೆಚ್ ಅಧಿಕಾರಿಗಳುಡಾ. ಶರಣಬಸಪ್ಪ ಖ್ಯಾತನಾಳ.ಜಿಲ್ಲಾ ಆಕುಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ, ಪ್ರಾಂಶುಪಾಲರು ಇಎಸ್ಐಸಿ ಕಲಬುರಗಿಡಾ. ಪ್ರಶಾಂತ ಪಾಟೀಲ್,ಜೇವರ್ಗಿ ಮತ್ತು ಸೇಡಂ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಸಿದ್ದು ಪಾಟೀಲ್ , ಡಾ. ಸಂಜು ಪಾಟೀಲ್.ಬಾಲಕಿಯರ ಬಾಲ ಮಂದಿರದ ಸುಪರಿಡೇಂಟ್ ಶಾಂತಾಬಾಯಿ ಮಾಲೆ. ಇದ್ದರು.

ವಿಶೇಷವಾಗಿ ಬಾಲಕಿಯರ ಬಾಲ ಮಂದಿರ ಎಲ್ಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ಜೊತೆಗೆ ಟ್ಯೂತ್ ಪೇಸ್ಟ್ ಮತ್ತು ಬ್ರಷ್ ವಿತರಣೆಮಾಡಿದರು. ಹಾಗೆ ಮಕ್ಕಳಿಗೆ ಪ್ರತಿಜ್ಞೆ ಮಾಡುವುದರ ಮೂಲಕ ಬಾಯಿ ಮತ್ತು ದಂತ ಅರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗೋಣ ಎಂದು ಪ್ರತಿಜ್ಞೆ ಮಾಡಿಸಲಾಯಿತು.

ಮೊದಲಿಗೆ ಪಾರ್ಥನ ಗೀತೆ ದಂತಆರೋಗ್ಯ ಅಧಿಕಾರಿಗಳು ಡಾ. ವಿಶ್ವನಾಥ ನಡೆಸಿಕೊಟ್ಟರು, ದಂತ ಆರೋಗ್ಯ ಅಧಿಕಾರಿಗಳು ಡಾ. ಶ್ವೇತಾ ದೇವದುರ್ಗ ಅವರು ಕಾರ್ಯಕ್ರಮ ನಿರೂಪಿಸಿದರು. ದಂತ ಆರೋಗ್ಯ ಅಧಿಕಾರಿಗಳು ಡಾ. ಶ್ವೇತಾ ರಾಜಗೀರಿ ಅವರು ಸ್ವಾಗತಿಸಿದರು. ದಂತ ಅರೋಗ್ಯ ಅಧಿಕಾರಿಗಳು ಡಾ. ದೀಪಾ ಅವರು ವಂದಿಸಿದರು. ಜಿಲ್ಲೆಯ ದಂತ ಆರೋಗ್ಯ ಅಧಿಕಾರಿಗಳು ,ಮತ್ತು ಬಾಲ ಮಂದಿರದ ಆಡಳಿತ ಮಂಡಳಿ ಸದಸ್ಯರು ಹಾಗೂ ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here