ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ನಿರ್ಲಕ್ಷ್ಯ: ಮುಖ್ಯಮಂತ್ರಿ ಭೇಟಿಗೆ ಒಕ್ಕೂಟ ನಿರ್ಧಾರ

0
59

ಕಲಬುರಗಿ: ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಈ ಭಾಗವನ್ನು ಸಂಪೂರ್ಣ ಕಡೆಗಣಿಸಿದ್ದು, ಹೊಸ ಹೆಸರಿನ ಹಾಗೆ ಈ ಭಾಗ ಪರಿವರ್ತನೆ ಆಗುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಸೆಪ್ಟೆಂಬರ್ ೧೭ರಂದು ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೈದ್ರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟವು ಭೇಟಿ ಮಾಡಿ ಚರ್ಚಿಸಲಿದೆ ಎಂದು ಒಕ್ಕೂಟದ ವಿಭಾಗೀಯ ಅಧ್ಯಕ್ಷ ಮಂಜುನಾಥ್ ನಾಲವಾರಕರ್ ಅವರು ಇಲ್ಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸೆಪ್ಟೆಂಬರ್ ೧೭ರಂದು ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣದಿಂದ ವಿಮಾನ ಹರಿಸುವ ಮೂಲಕ ಈ ಭಾಗವನ್ನು ಪರಿವರ್ತನೆಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿಲ್ಲ. ಮಂಡಳಿಗೆ ಅನುದಾನವನ್ನೂ ಸಹ ಬಿಡುಗಡೆ ಮಾಡಿಲ್ಲ. ಜಿಲ್ಲೆಗೆ ಒಬ್ಬ ಸಚಿವರೂ ಸಹ ಇಲ್ಲ. ಇದೆಂಥ ಸರ್ಕಾರ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Contact Your\'s Advertisement; 9902492681

ಹೈದ್ರಾಬಾದ್ ಕರ್ನಾಟಕ ವಿಮೋಚನೆಯಾಗಿದ್ದು ಒಂದು ವರ್ಷ ೧ ತಿಂಗಳು ತಡವಾಗಿ. ಅಲ್ಲಿಂದ ಇಲ್ಲಿಯವರೆಗೆ ಈ ಭಾಗವನ್ನು ನಿರ್ಲಕ್ಷಿಸುತ್ತ ಬರಲಾಗಿದೆ. ಹೈದ್ರಾಬಾದ್ ಕರ್ನಾಟಕದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸೇರಿಸಿಲ್ಲ. ಕಳೆದ ೧೦ ವರ್ಷಗಳಿಂದ ಇತಿಹಾಸ ರಚನಾ ಸಮಿತಿಗೆ ಕೊಡಬೇಕಾದ ಸೌಕರ್ಯಗಳನ್ನು ಕೊಡದೇ ಇರುವುದರಿಂದ ಇತಿಹಾಸ ಇಲ್ಲಿಯವರೆಗೆ ರಚನೆಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿರುವ ಐತಿಹಾಸಿಕ ಕ್ಷೇತ್ರಗಳಾದ ಬಹುಮನಿ ಸುಲ್ತಾನರ ಕೋಟೆ, ನಾಗಾವಿ ಎರಡನೇ ವಿಶ್ವವಿದ್ಯಾಲಯ, ಮಳಖೇಡ್ ಕೋಟೆ, ಸನ್ನತಿ, ಕಾಳಗಿ ಡನೇ ದಕ್ಷಿಣ ಕಾಶಿ, ಸುರಪುರದಲ್ಲಿನ ಐತಿಹಾಸಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಇಲ್ಲಿಯವರೆಗಿನ ಸರ್ಕಾರಗಳು ವಿಫಲವಾಗಿವೆ. ಈ ಎಲ್ಲ ವಿಷಯಗಳ ಕುರಿತು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಚಿನ್ ಫರತಾಬಾದ್, ನಂದಕುಮಾರ್ ನಾಗಭುಜಂಗೆ, ಸಂದೀಪ್ ಭರಣಿ, ದತ್ತು ಭಾಸಗಿ, ಮನೋಹರ್ ಬೀರನೂರ್, ಗೋಪಾಲ್ ನಾಟೀಕಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here