ಕಲಬುರಗಿ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಹಾಗೂ ಅವರ ಪುತ್ರಿ ಇಬ್ಬರೂ ಆರೋಪ ಮುಕ್ತರಾಗಿ ಹೊರಬರಲಿ ಎಂದು ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಗಳು ಜಿಲ್ಲೆಯ ಅಫಜಲಪೂರ್ ತಾಲ್ಲೂಕಿನ ದೇವಲ್ ಗಾಣಗಾಪೂರದಲ್ಲಿನ ದತ್ತನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ದತ್ತಾತ್ರೇಯ್ ದೇವರ ನಿರ್ಗುಣ ಪಾದುಕೆಗೆ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಇಬ್ಬರೂ ಜಾರಿ ನಿರ್ದೇಶನಾಲಯದ ತನಿಖೆಯನ್ನು ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥಿಸಿದರು.
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಆದಾಯ ತೆರಿಗೆ ದಾಳಿಗೆ ಒಳಗಾದಾಗ ಗುರೂಜಿ ದ್ವಾರಕನಾಥ್ ಅವರ ಸೂಚನೆಯಂತೆ ದೇವಲ್ ಗಾಣಗಾಪೂರಕ್ಕೆ ಬಂದು ದತ್ತನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಈಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.