ಕಲಬುರಗಿ; ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ನಗರದಕ್ಕೆ ಆಗಮಿಸಿದ ರಾಧಕೃಷ್ಣ ದೊಡ್ಡಮನಿ ಅವರಿಗೆ ಇಂದು ನಿವಾಸದಲ್ಲಿ ಸರಡಗಿ ಪರಿವಾರದಿಂದ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿ ಶುಭಾಷ ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯುವ ಮುಂಡರಾದ ಇರ್ಫಾನ್ ಸರಡಗಿ, ಕಲಬುರಗಿ ಉತ್ತರ ವಲಯದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಕೀಲ್ ಸರಡಗಿ, ಜಮೀಲ್ ಸರಡಗಿ, ಮಸ್ತಾನ್ ಅಲಿ ಪಠಾನ್, ಫಸಿ ಸರಡಗಿ, ಇಂಜಿನಿಯರ್ ಆಸೀಫ್, ರಫೀಕ್ ಸರಡಗಿ, ಅಬರಾರ್ ಜೈದಿ, ಮುಸ್ತಾಕ್, ಅರ್ಸಲಾನ್ ಸೇರಿದಂತೆ ಹಲವರು ಇದ್ದರು.