ಐತಿಹಾಸಿಕ ಶ್ರೀ ಶರಣಬಸವೇಶ್ವರ ಜಾತ್ರೆಗೆ ಸಾಕ್ಷಿಯಾಗಲು ಸಜ್ಜಾದ ಕಲಬುರಗಿ

0
80

ಕಲಬುರಗಿ: 18ನೇ ಶತಮಾನದ ಸಂತ, ಸಮಾಜ ಸುಧಾರಕ ಶ್ರೀ ಶರಣಬಸವೇಶ್ವರರ 202ನೇ ಪುಣ್ಯ ತಿಥಿಯ ಸ್ಮರಣಾರ್ಥ ಶನಿವಾರದಂದು ಜರುಗಲಿರುವ 202ನೇ ವರ್ಷದ ಶರಣಬಸವೇಶ್ವರ ರಥೋತ್ಸವ ಹಾಗೂ ವಾರ್ಷಿಕವಾಗಿ ಸಂಭ್ರಮಿಸುವ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಕಲಬುರಗಿ ನಗರ ಸಜ್ಜಾಗಿದೆ.

ಕಲಬುರಗಿ ನಗರವು “ಸೂಫಿ-ಸಂತ ತತ್ತ್ವಶಾಸ್ತ್ರ” ದ ಸಂಗಮಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರವನ್ನು ಹೊಂದಿದೆ, ಇಲ್ಲಿ ಶರಣಬಸವೇಶ್ವರರ ಪಾರ್ಥಿವ ಶರೀರÀ ಸಮಾಧಿಯಲ್ಲಿ ಪ್ರತಿμÁ್ಠಪಿಸಲಾಗಿದೆ. ಪ್ರತಿ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ತಮ್ಮ ಭಕ್ತಿ ನಮನವನ್ನು ಸಲ್ಲಿಸುತ್ತಾರೆ. ಅದೇ ರೀತಿ ಕಲಬುರಗಿಯ ಇನ್ನೊಂದು ಪುಣ್ಯಕ್ಷೇತ್ರವಾದ ಪ್ರಸಿದ್ಧ ಸೂಫಿ ಸಂತ ಖಾಜಾ ಬಂದೇ ನವಾಜ್ ದರ್ಗಾದಲ್ಲಿ ಪ್ರಸಿದ್ಧ ಖಾಜಾ ಬಂದೇ ನವಾಜ್ ಅವರ ಪಾರ್ಥಿವ ಶರೀರವನ್ನು ಪ್ರತಿμÁ್ಠಪಿಸಿದ ಸಮಾಧಿಗೆ ಸಾವಿರಾರು ಭಕ್ತರು ಸೇರಿ ವಸಂತ ಋತುವಿನ ಆರಂಭದಲ್ಲಿ ರಥೋತ್ಸವ ಮತ್ತು ವಾರ್ಷಿಕ ಜಾತ್ರೆಯನ್ನು ನಡೆಸುತ್ತಾರೆ.

Contact Your\'s Advertisement; 9902492681

ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದಲ್ಲಿರುವ ಬಡವರ ಮತ್ತು ವಂಚಿತ ವರ್ಗದವರ ಅಗತ್ಯತೆಗಳನ್ನು ಪೂರೈಸಲು ಮುಡಿಪಾಗಿಟ್ಟ ಸಂತ ಶರಣಬಸವೇಶ್ವರರು ತಾವು ಹೋಳಿ ಆಚರಣೆಯ ಐದು ದಿನಗಳ ನಂತರ ಲಿಂಗೈಕ್ಯರಾಗುವ ಮುನ್ಸೂಚನೆ ನೀಡಿದ್ದರು, ಮತ್ತು ಅದೇ ದಿನ ಅವರು ದಾಸೋಹ ಮಹಾಮನೆಯಲ್ಲಿ ಕೊನೆಯುಸಿರೆಳೆದರು. ಈ ದಿನ ಭಕ್ತರು ದಿನವಿಡೀ ಉಪವಾಸವಿದ್ದು, ಸಾಯಂಕಾಲ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ಜರುಗುವ ರಥೋತ್ಸವದ ನಂತರ ಸಿಹಿತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಿ ಪೂಜೆ ಸಲ್ಲಿಸುತ್ತಾರೆ. (ಲಿಂಗಾಯತ ಧರ್ಮದವರು, ಶರಣರ ಮತ್ತು ಧಾರ್ಮಿಕ ಮುಖ್ಯಸ್ಥರು ಲಿಂಗೈಕ್ಯರಾದ ದಿನವನ್ನು ಪುಣ್ಯದಿನವೆಂದು ಆಚರಿಸುತ್ತಾರೆ. ಪ್ರತಿ ವರ್ಷ ಈ ವರ್ಷ ನಡೆಯುವ ಪುಣ್ಯಸ್ಮರಣೆಯ ದಿನವನ್ನು ವಿಶೇಷವಾಗಿ ಭಕ್ತರು ಹಬ್ಬವಾಗಿ ಆಚರಿಸುತ್ತಾರೆ).

ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಾಗಲು ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಧಾರ್ಮಿಕ ಮತ್ತು ಜಾತಿಯ ಅಡೆತಡೆಗಳನ್ನು ಮೀರಿ ಸಾವಿರಾರು ಭಕ್ತರು ಕಲಬುರಗಿ ನಗರದಲ್ಲಿ ಒಂದೆಡೆ ಸೇರುತ್ತಾರೆ.

ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ಭಕ್ತರು ನಡೆದುಕೊಂಡು ಬಂದು ತಮ್ಮ ಇμÁ್ಟರ್ಥಗಳನ್ನು ಈಡೇರಿಸಿಕೊಳ್ಳಲು ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸುತ್ತಾರೆ.

“ಉಚ್ಛಾಯಿ” (ಉತ್ಸವ) ಒಂದು ದಿನ ಮುಂಚಿತವಾಗಿ ನಡೆಯುತ್ತದೆ. ಇದರಲ್ಲಿ ಸಂಸ್ಥಾನದ ಪೂರ್ವ ಪೀಠಾಧಿಪತಿಗಳು ಲಿಂಗೈಕ್ಯರಾದ ವರ್ಷವನ್ನು ಗುರುತಿಸುವದಂಗವಾಗಿ ದೇವಸ್ಥಾನದ ಸುತ್ತಲೂ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ “ಉಚ್ಛಾಯಿ” (ಸಣ್ಣ ರಥ) ಎಳೆಯಲಾಗುತ್ತದೆ. ಉತ್ಸವದಂಗವಾಗಿ ಸಂಜೆ ಮದ್ದು ಪಟಾಕಿಗಳು ದೇವಾಲಯದ ಸುತ್ತಲೂ ಆಕಾಶವನ್ನು ಬೆಳಗುತ್ತವೆ.

ಈ ಆಚರಣೆಗಳು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಹಾಗೂ ಜನರ ಮನಸ್ಸಿನಲ್ಲಿ ಸಂತರು ಅಳವಡಿಸಿಕೊಂಡಿರುವ ವಿಶಿಷ್ಟ ಗುಣವನ್ನು ತೋರಿಸುತ್ತದೆ. ಜಾತ್ರಾ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರಿಗೆ ಆಶ್ರಯ ಮತ್ತು ಅನ್ನಸಂತರ್ಪಣೆ ಮಾಡುವ ಮೂಲಕ ಸೇವೆಗೈಯ್ಯುತ್ತಾರೆ ಮತ್ತು ವಿಶಾಲವಾದ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ಕಡೆಯಿಂದ ಬಂದಂತಹ ಭಕ್ತರು ಭಾಗವಹಿಸುತ್ತಾರೆ.

ಭಕ್ತಾದಿಗಳಿಗೆ ತಮ್ಮ ಬೆಳಗಿನ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ದೇವಾಲಯದ ಸಂಕೀರ್ಣದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ರಥೋತ್ಸವದಲ್ಲಿ ಪಾಲ್ಗೊಳ್ಳಲು ಎಲ್ಲಾ ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ಭಕ್ತರ ಹಸಿದ ಹೊಟ್ಟೆ ತುಂಬಲು ವಿಶೇಷ ಅನ್ನಸಂತರ್ಪಣೆ (ಪ್ರಸಾದ) ವ್ಯವಸ್ಥೆ ಮಾಡಲಾಗಿದೆ.

ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರು ಮತ್ತು ಹೊಸದಾಗಿ ಕೊಯ್ಲು ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಭಕ್ಷ್ಯವಾದ “ಹುಳಿ ಬಾನ” ತಯಾರಿಸಲಾಗುತ್ತದೆ. “ನೇವೈದ್ಯ” ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯಗಳನ್ನು ಅನುಸರಿಸಿ ತಯಾರಿಸಲಾದ ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ಭಕ್ತನು ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಹೆಜ್ಜೆ ಹಾಕುತ್ತಾನೆ. “ಹುಳಿ ಬಾನ” ವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಐದು ಬಾರಿ ರಥದ ಪ್ರದಕ್ಷಿಣೆ ಹಾಕಿದ ನಂತರ ರಥವು ದೇಗುಲದ ಸಂಕೀರ್ಣದಲ್ಲಿ ಪ್ರದಕ್ಷಿಣೆ ಮಾಡಿ, ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ, “ಹುಳಿ ಬಾನ”ವನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ರಥೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ಯುಗಾದಿ ಹಬ್ಬದವರೆಗೆ ಹತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವ್ಯಾಪಾರಿಗಳು ತಮ್ಮ ಸರಕುಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಮಕ್ಕಳಿಗೆ ಮನರಂಜನೆ ಮತ್ತು ವಿನೋದ ಹಾಗೂ ಉಲ್ಲಾಸಕ್ಕಾಗಿ ವಿಶೇಷ ಆವರಣವನ್ನು ಮೀಸಲಿಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here