13ರಂದು ಕೂಡ್ಲೂರ ಬಸವಲಿಂಗೇಶ್ವರ ಜಾತ್ರೆ

0
89

ಫರಹತಬಾದ : ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಶ್ರೀ ಕೂಡ್ಲೂರು ಬಸವಲಿಂಗೇಶ್ವರ 46ನೇ ಜಾತ್ರಾ ಮಹೋತ್ಸವ ಜರಗಲಿದೆ.

ಇದೆ ಏಪ್ರಿಲ್ 12ರಂದು ಮಧ್ಯಾಹ್ನ 2 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಪುರವಂತರ ಸೇವೆ ಮತ್ತು ರಾತ್ರಿ ಅಖಂಡ ಭಜನೆ ನಡೆಯುತ್ತವೆ.

Contact Your\'s Advertisement; 9902492681

13ರಂದು ಬೆಳಗ್ಗೆ ಶನಿವಾರ ಕರ್ತೃ ಗದ್ದಿಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಜನೆ ಜರುಗುತ್ತವೆ. ಸಾಯಂಕಾಲ 5:30 ನಿಮಿಷಕ್ಕೆ ಬಹು ವಿಜ್ರಂಬಣೆಯಿಂದ ಸದ್ಗುರು ಶ್ರೀ ಕೂಡ್ಲೂರು ಬಸವಲಿಂಗೇಶ್ವರ ರಥೋತ್ಸವ ಜರಗುವುದು ಅಂದು ರಾತ್ರಿ ಮಹಾಪ್ರಸಾದ ವಿತರಣೆ. ಹಾಗೂ ಜನಪದ ಸಾಹಿತ್ಯ ಮತ್ತು ಇನ್ನಿತರ ಮನೋರಂಜನೆ ಕಾರ್ಯಕ್ರಮಗಳು ನಡೆಯುವುದು.

14ರಂದು ರವಿವಾರ ಮುಂಜಾನೆ 8 ಗಂಟೆಗೆ ಹಾಗೂ ಸಾಯಂಕಾಲ 5 ಗಂಟೆಗೆ ಸುಪ್ರಸಿದ್ಧ ಪೈಲ್ವಾನ್ ಜಂಗಿ ಕುಸ್ತಿಗಳು ನಡೆಯುತ್ತವೆ ಕಾರ್ಯಕ್ರಮ ನೇತೃತ್ವವನ್ನು ಕೂಡ್ಲೂರ ಬಸವಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ಶಿವರಾಜಪ್ಪ ಅಪ್ಪ ವಹಿಸಲಿದ್ದಾರೆ. ಸಕಲ ಸದ್ದಕರು ತನು. ಮನ. ದನದಿಂದ ಸಹಭಾಗಿಯಾಗಿ ಪೂಜ್ಯ ಶ್ರೀ ಬಸವಲಿಂಗೇಶ್ವರಗೆ ಕೃಪಾಶೀರ್ವಾದ ಪಡೆದು ಪುನೀತರಾಗಬೇಕಾಗಿ ವಿನಂತಿ. ಸಕಲ ಸದ್ಭಕ್ತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here