ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಸಿದ ದಾಸಿಮಯ್ಯ

0
31

ಕಲಬುರಗಿ: ದೇವರ ದಾಸಿಮಯ್ಯ ಅವರು ನೇಯ್ಗೆ ಕಾಯಕ ಮಾಡುವದರ ಜೊತೆಗೆ, ಮೌಢ್ಯತೆ, ಕಂದಾಚಾರ, ಅಂದಶೃದ್ಧೆ, ಜಾತಿಯತೆ, ಶೋಷಣೆ, ಅನ್ಯಾಯದಂತಹ ಪಿಡುಗುಗಳಿಂದ ತೂತು ಬಿದ್ದ ಸಮಾಜವನ್ನು ತಮ್ಮ ವಚನಗಳ ಮೂಲಕ ನೇಯುವ ಕಾರ್ಯ ಮಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಟ ಶರಣರಾಗಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಶರಣ ದೇವರ ದಾಸಿಮಯ್ಯನವರ 1045ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಶರಣ ಚಿಂತಕ ಬಸವರಾಜ ಎಸ್.ಕಂಟೆಪ್ಪಗೋಳ ಮಾತನಾಡಿ, ನೆಮ್ಮದಿ, ಸಮೃದ್ಧಯುತ ಜೀವನ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾದ, ಸಮಾಜದಲ್ಲಿ ಒಂದು ಅಮೂಲಾಗ್ರಹವಾದ ಬದಲಾವಣೆಗೆ ಕಾರಣವಾದ ‘ವಚನ ಚಳುವಳಿ’ಗೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ‘ರಾಮನಾಥ’ ಎಂಬ ಅಂಕಿತ ನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಿಬ್ಬಂದಿ ಸಾನಿಯಾ ಶೇಖ್, ಮುಖಂಡ ಮೆಹಬೂಬ ಪಟೇಲ್ ಜಂಬಗಿ, ಪ್ರಮುಖರಾದ ದಾದಾಪೀರ್ ಕಡಣಿ, ಮಕ್ಬೂಲ್ ಪಟೇಲ್ ಮಕಾಶಿ,ಅಮೀನ ಪಟೇಲ್ ಬಿರಾದಾರ, ದಸ್ತಗೀರ ಪಟೇಲ್ ಮೋಕಾಶಿ, ಪರವಿಲ್, ಜಗನಾಥ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here