ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಬಡಿಗೇರ

0
72

ಆಳಂದ: ಭವ್ಯ ಭಾರತದ ಸಾಮರಸ್ಯ ಬದುಕು ಕಟ್ಟಲು ಬಹುದೊಡ್ಡ ಕೊಡುಗೆ ನೀಡಿದ ಭಗವಾನ ಶ್ರೀ ವಿಶ್ವಕರ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರೊ| ರಾಜಕುಮಾರ ಬಡಿಗೇರ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಸ್ಥಳೀಯ ಕಾಳಿಕಾದೇವಿ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ಭಗವಾನ ವಿಶ್ವಕರ್ಮ ಅವರ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದಲ್ಲಿ ವಾಸ್ತು ಶಿಲ್ಪಕ್ಕೆ ಜಕಣಾಚಾರ್ಯರು, ಧಾರ್ಮಿಕ ಕ್ಷೇತ್ರಕ್ಕೆ ತಿಂಥಣಿಯ ಮೌನೇಶ್ವರ, ಸಿದ್ಧಪ್ಪಜಿ ಮಹಾರಾಜರು, ಗುಡ್ಡಪ್ಪ ಧಾನಮ್ಮ, ಸಿರಸಂಗಿಯ ಕಾಳಕಾದೇವಿ ಹೀಗೆ ಅನೇಕ ಮಹನೀಯರು ಬದುಕಿನ ಆದರ್ಶಮಾರ್ಗವನ್ನು ಕೊಟ್ಟಿದ್ದಾರೆ. ಸಮಾಜಮುಖಿಯಾಗಿ ಪರೋಪಕಾರಿಗಳಾಗಿ ತೀರಾ ಹಿಂದುಳಿದ ವಿಶ್ವ ಕರ್ಮ ಸಮಾಜ ಶಿಕ್ಷಣ, ಆರ್ಥಿಕ, ಸಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ಸಂಘಟಿತರಾಗಿ ಮುನ್ನೆಡೆಯಬೇಕು ಎಂದರು.

Contact Your\'s Advertisement; 9902492681

ಸಾನ್ನಿಧ್ಯ ವಹಿಸಿದ್ದ ಅಫಜಲಪೂರ ಮಠದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ವಿಶ್ವಕರ್ಮ ಧರ್ಮ ಮತ್ತು ಸಂಸ್ಕೃತಿ ಕೃತಿಯನ್ನ ಬಿಡುಗಡೆಗೊಳಿಸಿ ಆಶೀರ್ವನ ನೀಡಿದರು. ಉಪನ್ಯಾಸಕ ಸಂಜಯ ಪಾಟೀಲ, ಸಮಾಜದ ಅಧ್ಯಕ್ಷ ಸಂಪತಕುಮಾರ ವೇದಪಾಠಕ ಮಾತನಾಡಿದರು. ಮುಖಂಡ ಮಹಾದೇವ ಪೋದ್ದಾರ, ವಿಜಯಕುಮಾರ ಸುತಾರ, ಅಪ್ಪಾರಾವ ಪೊದ್ದಾರ, ಜಯಶ್ರೀ ಸೋನಾರ, ಸಂಜಯ ಪಂಚಾಳ, ಮಹಿಳಾ ಘಟಕದ ಅಧ್ಯಕ್ಷ ವೈಶಾಲಿ ಅಶೋಕ ಪೋದ್ದಾರ. ಆಕಾಶ ಶಿವಾನಂದ ಪೋದ್ದಾರ ಸೇರಿ ಅನೇಕರು ಪಾಲ್ಗೊಂಡಿದ್ದರು. ಇದೇ ವೇಳೆ ಎಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮನೋಹರ ಪೋದ್ದಾರ ವಂದಿಸಿದರು. ತಹಸೀಲ್ದಾರ ಕಚೇರಿಯಿಂದ ಜರುಗಿದ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಯನ್ನು ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಚಾಲನೆ ನೀಡಿದರು. ಬಳಿಕ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕಾಳಿಕಾದೇವಿ ದೇವಸ್ಥಾನಕ್ಕೆ ತಲುಪಿದ ಬಳಿಕ ಸಮಾಜದ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here