ಶಹಾಬಾದ: ತಾಲೂಕ ಮಾದಿಗ ಸಮಾಜದ ಅಧ್ಯಕ್ಷರಾದ ವಿಕ್ರಮ ಮೂಲಿಮನಿ ಯವರ ನೇತೃತ್ವದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ರವರ 117ನೇ ತಾಲೂಕ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಶರಣು ಪಗಲಾಪುರ ರವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ತಾಲೂಕಾಧ್ಯಕ್ಷ ವಿಕ್ರಮ್ ಮೂಲಿಮನಿ ಹಾಗೂ ಮುಖಂಡರಾದ ಶಿವರಾಜ ಕೋರೆ ಮಾತನಾಡಿ,ಈ ಬಾರಿಯ ಜಯಂತೋತ್ಸವ ಕಾರ್ಯಕ್ರಮ ವಿಶಿಸ್ಷ ಹಾಗೂ ವಿಭಿನ್ನಾವಿ ಆಚರಿಸಲು ಮುಂದಾಗಿದ್ದೆವೆ.ಆದ್ದರಿಂದ ಈ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸಮಾಜದ ಮುಖಂಡ ಶರಣು ಪಗಲಾಪೂರ ಸೂಕ್ತ ಎಂದು ಸಮಾಜದ ಬಾಂಧವರು ತಿಳಿಸಿದ್ದರಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಭೀಮರಾಯ ಕಗನಹಳ್ಳಿ, ಕಿರಣ ಕೋರೆ, ರವಿ ಬೆಳಮಗಿ, ಯಲ್ಲಾಲಿಂಗ ಹೈಯಾಳಕರ, ನಾಗರಾಜ ಮುದ್ನಾಳ, ಬಾಬು ರಾಜಕಪೂರ, ನವೀನ ಸಿಪ್ಪಿ, ಮಹೇಶ ಕಾಂಬಳೆ, ಸಂತೋಷ ಹುಲಿ, ಪ್ರಮೋದ ಮಲ್ಹಾರ, ಈಶ್ವರ ಪಗಲಾಪುರ, ಮಲ್ಲೇಶಿ ಸೈದಾಪುರ, ಯಲ್ಲಪ್ಪ ಜಾಲಹಳ್ಳಿ, ಅಮರ ಕೋರೆ, ಕಲ್ಯಾಣಿ, ಮಹೇಶ, ಸಾಗರ, ಹಣಮಂತ ಸೇರಿದಂತೆ ನಗರ ಸಭೆಯ ಸದಸ್ಯ ರವಿ ರಾಠೋಡ ಹಾಗೂ ಮಹಾದೇವ ಗೊಬ್ಬೂರ ಉಪಸ್ಥಿತರಿದ್ದರು.