ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಶಿಬಿರ

0
38

ಮಾದನಹಿಪ್ಪರಗ: ಇಲ್ಲಿನ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜನ ರೆಡ್ ಕ್ರಾಸ್ ಘಟಕ, ಏನ್.ಎಸ್. ಎಸ್ ಘಟಕ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ ವಿದ್ಯಾರ್ಥಿನಿಯರನ್ನು ಕೇಂದ್ರೀಕೃತಗೊಳಿಸಿ ಆಳಂದ ತಾಲೂಕ ಆರೋಗ್ಯ ಕೇಂದ್ರಗಳ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಭಿನವ ಶಿವಲಿಂಗ ಸ್ವಾಮೀಜಿ ಗ್ರಾಮೀಣ ಭಾಗದ ಬಹುತೇಕ ಹೆಣ್ಣುಮಕ್ಕಳು ಅರೋಗ್ಯದ ಬಗ್ಗೆ ಗಮನ ಕೊಡದೆ ನಿರ್ಲಕ್ಷ ವಹಿಸುತ್ತಿರುವುದು ಖೇದಕರ, ಹೆಣ್ಣುಮಕ್ಕಳು ಹೆಚ್ಚು ನಿಗಾವಹಿಸಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಕರೆಕೊಟ್ಟರು.

Contact Your\'s Advertisement; 9902492681

ಜೊತೆಗೆ, ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಾಮಾನ್ಯ ಎಂಬಂತಾಗಿದೆ. ಮನುಷ್ಯನ ಒತ್ತಡದ ಬದುಕಿನಲ್ಲಿ ಈ ಬಗ್ಗೆ ಗಮನ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಇವು ಸಾಮಾನ್ಯವಾಗಿ ಮನುಷ್ಯನನ್ನು ಕಾಡಲಾರಂಭಿಸಿವೆ ಎಂದರು.

ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡುವುದು ಬಹಳ ಮುಖ್ಯ. ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಡಾ. ಸುಶಾಂತ ಸಂಗಾ ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಮಾನಸಿಕ ರೋಗಗಳು ಕುರಿತು ಉಪನ್ಯಾಸ ನೀಡಿದರು. ಡಾ. ಆರತಿ ಪರಗೆ, ಸಯೀದಾ ರಿಹನಾ, ಡಾ. ಸಂಘರ್ಷ ವಾಲಿ, ಶಂಕರ ಸುರೆ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಸವಂತರಾವ ಪಾಟೀಲ ಜಾವಳಿ ವಹಿಸಿದ್ದರು. ನೂರಾರು ವಿದ್ಯಾರ್ಥಿಗಳು ಶಿಬಿರದಲ್ಲಿ ತಪಾಸಣೆಗೆ ಒಳಗಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here