ಬೀಜ, ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಕೆಪಿಆರ್‍ಎಸ್ ಪ್ರತಿಭಟನೆ

0
18

ಶಹಾಬಾದ: ಬೀಜ, ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಹಾಗೂ ನಕಲಿ ಮೆಕ್ಕೆಜೋಳ ಬೀಜದಿಂದ ಬೆಳೆ ಹಾನಿಯಾಗಿದ್ದು, ಕೂಡಲೇ ಸಂತ್ರಸ್ತ ರೈತನಿಗೆ ನಷ್ಟ ಭರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು. ಪ್ರತಿಭಟನೆಕಾರರು ನಂತರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್‍ಪಿಯು ಇಲ್ಲ. ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಪ್ರಕಾರ ಸಿ2+50 ಸೇರಿಸಿ ಬೆಂಬಲ ಬೆಲೆ ಕೊಡಬೇಕು. ಸಿಕ್ಕಾಪಟ್ಟೆ ಲಾಗೋಡಿ ಮಾಡಿದ ರೈತರ ಬೆಳೆಗಳಿಗೆ ಕವುಡಿ ಕಿಮ್ಮತ್ತು ಇಲ್ಲ. ಇದು ಘೋರ ಅನ್ಯಾಯ ಮಾಡಿದಂತಾಗಿದೆ. ಬರಗಾಲದ ಅಬ್ಬರದಲ್ಲಿ ರೈತರು ಕಂಗಾಲಾಗಿದ್ದಾರೆ. ಬಿತ್ತನೆ ಬೀಜಕ್ಕೆ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಕಳೆದ ವರ್ಷ ಶತಮಾನದಲ್ಲಿಯೇ ಕಂಡರಿಯದ ಭೀಕರ ಬರಗಾಲವನ್ನು ರಾಜ್ಯ ಅನುಭವಿಸಿತ್ತು. ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ. ಮುಂಗಾರು ಮಳೆ ಕೂಡ ಉತ್ತಮವಾಗಿರಲಿದೆ ಎಂಬ ಸೂಚನೆಗಳು ಬರುತ್ತಿವೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದಾಗ್ಯೂ, ಬಿತ್ತನೆ ಬೀಜಗಳ ಕೊರತೆ ಎಲ್ಲೆಡೆ ಕಂಡುಬಂದಿದೆ. ಬಿತ್ತನೆ ಬೀಜಗಳು ಎಲ್ಲೆಡೆ ಶೇಕಡಾ 40ರಿಂದ 50ರಷ್ಟು ಏರಿಕೆ ಕಂಡಿದೆ ಎಂದು ಅವರು ಆರೋಪಿಸಿದರು.

ಅಗತ್ಯ ಬಿತ್ತನೆ ಬೀಜಗಳ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ. ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಲಿ ಇರುವ ಹುದ್ದೆಗಳಿಂದಾಗಿ ರೈತರಿಗೆ ಸಕಾಲದಲ್ಲಿ ಸೇವೆ ಸಿಗುತ್ತಿಲ್ಲ. ಬಿತ್ತನೆ ಚಟುವಟಿಕೆಗಳಿಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಬಿತ್ತನೆ ಬೀಜಗಳಿಗಾಗಿ ರೈತರು ಗಂಟೆಗಂಟಲೇ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕೂಡಲೇ ಅಗತ್ಯ ಬೀಜಗಳು ಮತ್ತು ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಲು ಹಾಗೂ ಅವುಗಳ ಬೆಲೆಗಳನ್ನು ನಿಯಂತ್ರಿಸಿ, ರೈತರಿಗೆ ಹೊರೆಯಾಗದಂತೆ ಸಹಾಯಧನದಲ್ಲಿ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗಪ್ಪ ರಾಯಚೂರಕರ್, ಕ್ಷೇಮಲಿಂಗ ನರೋಣಾ ಭಂಕೂರ, ನಾಗೇಂದ್ರ ಕಂಠಿ, ಅರುಣ ಮ್ಯಾಗೇರಿ, ವಿಜಯಕುಮಾರ,ನಿಲೇಶ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here