ಬೆಂಗಳೂರು : ಹಿಂದುಗಳು ಹಿಂಸಾವಾದಿಗಳು, ದ್ವೇಷ ಹಬ್ಬಿಸುತ್ತಿರುವವರು ಎಂಬ ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಡೀ ಹಿಂದು ಸಮಾಜಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ಪ್ರೀತಿ ಹೊನ್ನಗುಡಿ ಖಂಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಿಜೆಪಿ, ಆರ್ಎಸ್ಎಸ್ನ್ನು ಟೀಕಿಸಲಿ, ಸಿದ್ಧಾಂತವನ್ನು ವಿಮರ್ಶೆ ಮಾಡಲಿ. ಆದರೆ ಇಡೀ ಹಿಂದು ಸಮಾಜಕ್ಕೆ ಕಳಂಕ ತರುವಂತ ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಗೌರವ ತರುವಂತದ್ದು ಅಲ್ಲ. ಕೂಡಲೇ ಅವರು ಹಿಂದು ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಮುಂಬೈ, ಸಂಸತ್, ವೈಷ್ಣದೇವಿ ಯಾತ್ರಿಕರ ಮೇಲೆ ಭಯೋತ್ಪಾದನಾ ದಾಳಿ ಮಾಡಿದವರು ಯಾರು ಎಂಬುದನ್ನು ಹಿಂಸೆ, ದ್ವೇಷ ಎನ್ನುವ ರಾಹುಲ್ ಗಾಂಧಿ ಹೇಳಿಕೆ ನೀಡಲಿ. 21 ತಿಂಗಳು ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟಿದ್ದ ಬಗ್ಗೆ ಮಾತನಾಡಲಿ, 1984ರಲ್ಲಿ ಮೂರು ಸಾವಿರ ಸಿಬ್ಬರನ್ನು ಕೊಲೈಗೈದ ಬಗ್ಗೆ, ಕಾಶ್ಮೀರದ ಪಂಡಿತರ ಮಾರಣ ಹೋಮದ ಬಗ್ಗೆ ಬಾಯಿ ಬಿಚ್ಚಲಿ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡಿನ ಸಿಎಂ ಪುತ್ರ ಸ್ಟಾಲಿನ್ ಸನಾತನ ಧರ್ಮ ಸರ್ವನಾಶ ಮಾಡುತ್ತೇವೆ ಎಂದ, ಕೇರಳದಲ್ಲಿ ಮುಸ್ಲಿಂ ಲೀಗ್ನವರು ಹಿಂದುಗಳ ರುಂಡ ಕತ್ತರಿಸುತ್ತೇವೆ ಎಂದವರ ಬಗ್ಗೆ ಮಾತನಾಡಲಿ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದ ಬಗ್ಗೆ ಸ್ಪಷ್ಟನೆ ನೀಡಲಿ. ತುರ್ತು ಪರಿಸ್ಥಿತಿ ಹೇರಿ 1.40 ಲಕ್ಷ ಜನರನ್ನು ಜೈಲಿಗೆ ಅಟ್ಟಿದ್ದು, ದ್ವೇಷ, ಹಿಂಸಾ ರಾಜಕಾರಣ ಎಂದು ಹೇಳಿದರು.