- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ತಾಲೂಕಿನ ಯಾಗಾಪುರ ಗ್ರಾಮದಲ್ಲಿ ವಾಡಿ ಪೊಲೀಸ್ ಠಾಣೆ ವತಿಯಿಂದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.
ನಂತರ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ಮಾತನಾಡಿ, ಮೊಹರಂ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಮಾಡಿಕೊಡದೇ ಸರ್ವರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದರು.
ಹಬ್ಬ ಹರಿದಿನಗಳಲ್ಲಿ ಹಳೆಯ ವೈಷಮ್ಯವನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುವುದು. ಸುಖಾ ಸುಮ್ಮನೆ ಜಗಳ ತೆಗೆಯುವುದು ಮಾಡಬಾರದು ಒಂದು ವೆಳೆ ಅಂತಹ ಗಲಾಟೆಗಳು ನಡೆದರೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಐಗಳಾದ ಚಂದ್ರಶೇಖರ ತಿಗಡಿ, ವಿಜಯಕುಮಾರ್, ಪಿಎಸ್’ಐ ತಿರುಮಲೇಶ ಕುಂಬಾರ್, ಗ್ರಾಪಂ ಅಧ್ಯಕ್ಷೆ ಶಾಂತಿಬಾಯಿ, ಡೊಂಗ್ರೋ ಚವ್ಹಾಣ ಸೇರಿದಂತೆ ಗ್ರಾಪಂ ಸದಸ್ಯರು, ಅನೇಕ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.