ವಾಡಿ: ಜನಸ್ಪಂದನ ಸಭೆ ಹಕ್ಕುಪತ್ರ ಮೂಲಭೂತ ಸೌಕರ್ಯ ಒದಗಿಸಲು ಮನವಿ

0
55

ವಾಡಿ: ಕಳೆದ 40 ವರ್ಷಗಳ ನಮ್ಮ ಬೇಡಿಕೆಯಾದ ಸ್ಥಳೀಯ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಕರ್ಯಪ್ರವರ್ತರಾಗಬೇಕು ಎಂದು ಬಸಪ್ಪ ಗುಡಿ (ಬಸವನ ಖಣಿ) ಏರಿಯಾದ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಅವರಿಗೆ ಮನವಿ ಸಲ್ಲಿಸಿದರು.

ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ವಾಡಿ ವತಿಯಿಂದ ಬಸಪ್ಪ ಗುಡಿ (ಬಸವನಖಣಿ) ಏರಿಯಾದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮನವಿ ಪತ್ರ ಸಲ್ಲಿಸಿದ ಸ್ಥಳೀಯ ನಿವಾಗಳು ಶುದ್ಧ ಕುಡಿಯಲು ನೀರು, ಬದುಕಲು ಸ್ವಂತ ಸೂರು ಒದಗಿಸುವಂತೆ ಆಗ್ರಹಿಸಿದ ಸ್ಥಳೀಯರು, ಬಡಾವಣೆಯಲ್ಲಿ ನಲ್ಲಿಗಳಿವೆ. ಆದರೆ ನೀರಿಲ್ಲ. ಬಾವಿ ನೀರು ಕುಡಿಯಲು ಯೋಗ್ಯವಿಲ್ಲ. ಆದಷ್ಟು ಬೇಗ ನಮ್ಮ ಮೂಲಭೂತ ಸೌಲಭ್ಯ ಮನೆಗಳ ಹಕ್ಕುಪತ್ರ ನೀಡಬೇಕು. ಸೂಕ್ತ ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಇದೇ ಸಣದರ್ಭದಲ್ಲಿ ಬಸವ ನಗರ ಹಾಗೂ ಸೇವಾಲಾಲ್ ನಗರ ತಾಂಡಾ ನಿವಾಸಿಗಳು ತಮ್ಮ ಬಡಾವಣೆಯ ಕುಂದುಕೊರತೆಗಳ ಕುರಿತು ಮನವಿ ಸಲ್ಲಿಸಿದರು.

ಪುರಸಭೆ ಮುಖ್ಯಾಧಿಕಾರಿ ಸಿ. ಫಕೃದ್ದೀನ್ ಸಾಬ್ ಮಾತನಾಡಿ, ಈಗಾಗಲೇ ಬಸವನಗುಡಿ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆದು ನೀರಿನ ಸಮಸ್ಯೆ ಬಗೆಹರಿಸುತ್ತೇವೆ. ಬೀದಿ ದೀಪ ಹಾಗೂ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಉಳಿದ ಬೇಡಿಕೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಈ ವೇಳೆ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪರಿಸರ ಅಭಿಯಂತರ ಪೂಜಾ ಫುಲಾರೆ, ಈಶ್ವರ ಅಂಬೇಕರ್, ಮನೋಜ ಹಿರೊಳ್ಳಿ, ಬಸವರಾಜ ಪೂಜಾರಿ, ಶ್ರೀಮಂತ ಧುಮ್ಮನಸೂರ, ಕೆ. ವಿರೂಪಾಕ್ಷಿ, ಬಸಮ್ಮ ಪಾಟೀಲ, ಜ್ಯೋತಿ ಗುತ್ತೇದಾರ, ಸೂಯಕಾಂತ ಕೊಂಕನಳ್ಳಿ, ಮುಖಂಡರಾದ ಕಿಶನ್ ಜಾಧವ್, ಗಣೇಶ ರಾಠೋಡ, ರಾಜೇಶ್ ಜಾಧವ್, ಕಿಶನ್ ಪೂಜಾರಿ, ಶಂಕರ್ ಚಿನ್ನಾ ರಾಠೋಡ, ಪ್ರಭು ಜಾಧವ್, ಶ್ರೀಶೈಲಪುರಾಣಿಕ, ರಾಮು ರಾಠೋಡ, ರವಿ ಕಾರಬಾರಿ, ಪ್ರಕಾಶ ಪೂಜಾರಿ, ಹಣಮಂತ ಭೋವಿ, ಹೀರಾ ಚವ್ಹಾಣ, ವಿಜಯ ಪವಾರ, ಸುಭಾಷ ಜಾಧವ್, ಗೋಪಾಲ ರಾಠೋಡ, ಶಿವುಕಾಂತಮ್ಮ ಗಾಯಕವಾಡ, ರೇಣುಕಾ ನಿಂಬರ್ಗಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here