ಸೇಡಂ: ತಾಲೂಕು ಸೇರಿದಂತೆ ಹಲವು ಕಡೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸರಿಯಾದ ರೀತಿಯಲ್ಲಿ ನೀಡದೇ ಇರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಗಮನ ಹರಿಸಿ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.
ಸರಕಾರದಿಂದ ಬಂದ ಪೌಸ್ಟಿಕ್ ಆಹಾರವನ್ನು ಅಂಗನವಾಡಿ ಕೇಂದ್ರಗಳಿಗೆ ಸಾಗಿಸುವಾಗ ಕಡಿಮೆಯಲ್ಲಿ ನೀಡಿ ಉಳಿದ ಪೌಸ್ಟಿಕ ಆಹಾರವನ್ನು ಬಸ್ ನಿಲ್ದಾಣ, ಚಿಂಚೋಳಿ ಕ್ರಾಸ, ಉಡಗಿ ರೋಡ,ವಿದ್ಯಾ ನಗರ ಹಾಗೂ ವೆಂಕಟೇಶ ನಗರ ಕಿರಾಣಿ ಅಂಗಡಿ ಮತ್ತು ಸಣ್ಣ ಪುಟ್ಟ ಅಂಗಡಿಗಳಲ್ಲಿ ರಾಜಾರೋಷವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗಾಗಿ ಪೌಷ್ಟಿಕ ಆಹಾರವನ್ನು ತಲುಪಿಸುವ ಸಂದರ್ಭದಲ್ಲಿ ತಾವುಗಳು ಹೋಗಿ ಪರಿಗಣಿಸಿ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಿಸಲು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಎದುರು ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಗುವುದೆಂದು ಮನವಿ ಪತ್ರ ನೀಡುವ ಮೂಲಕ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ದೇವು ನಗರ ಉಪಾಧ್ಯಕ್ಷರು,
ಸಿದ್ದು ಮಹೇಶ ಆರ್ ಹುಡುಗಿ, ಮಲ್ಲಿಕಾರ್ಜುನ್ ಕೆಬಿ ಅಧ್ಯಕ್ಷರು,ಸುನಿಲ್ ಶಾಸ್ತ್ರಿ ನಗರಧ್ಯಕ್ಷರು, ರುದ್ರಪ್ಪ, ಬಸು ಕಲ್ಕಮ್ ಶಿವು ಜುಲ್ಪಿ, ವಿಶ್ವರಾಧ್ಯ ಅಂಗನಳ್ಳಿ ಉಪಸ್ಥಿತರಿದ್ದರು.