ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ದಲ್ಲಿ ಹಮ್ಮಿಕೊಂಡಿದ್ದ” ವಿಶ್ವ ಸ್ತನ ಪಾನ ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಅಪರ್ಣ ಭದ್ರಶೆಟ್ಟಿ ಮೇಡಮ್ ಅವರು ಚಾಲನೆ ನೀಡಿ ಮಾತನಾಡಿ ಆಗಸ್ಟ್ ಮೊದಲನೇ ವಾರದಲ್ಲಿ ಈ ಕಾರ್ಯಕ್ರಮ ಜರಗುತ್ತದೆ.
ತಾಯಿ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಅದು ಅಮೃತಕ್ಕೆ ಸಮಾನವಾಗಿರುತ್ತದೆ. ಅದಕ್ಕಾಗಿ ತಾಯಂದಿರು ಎದೆ ಹಾಲು ಏಕೆ ನೀಡಬೇಕು? ಅದರ ಪ್ರಯೋಜನಗಳೇನು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಇದು ಸಹಜವಾಗಿ ತಾಯಂದಿರಿಗೆ ಯಾವುದೇ ಹಣದ ಖರ್ಚಿಲ್ಲದೆ ಲಭ್ಯವಾಗಿದ್ದು ಮಗುವಿಗೆ ಹುಟ್ಟಿದ ಅರ್ಧ ಗಂಟೆ ಒಳಗೆ ಹಾಲುಣಿಸುವುದನ್ನು ಎಲ್ಲರೂ ಪಾಲಿಸಬೇಕು ಎಂದು ಮಾಹಿತಿ ನೀಡಿದರು.
ತರುವಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮಾತನಾಡಿ ಪ್ರಸ್ತುತವಾಗಿ ತಾಯಂದಿರಿಗೆ ಒಂದು ವಾರ ಸರಕಾರ ಮೀಸಲಾಗಿಸಿ ತಮಗೆ ಇದರ ಪ್ರಯೋಜನಗಳು ತಿಳಿಸುವಂತೆ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದ್ದರು ತಾಯಂದಿರು ಮಗುವಿಗೆ ಎದೆ ಹಾಲುಣಿಸುವುದರಿಂದ ತನ್ನ ಅಂಗ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಮಾರಕ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ.
ಎದೆಹಾಲು ಕ್ಯಾನ್ಸರ್ ದಂತಹ ಮಾರಕ ರೋಗವನ್ನು ತಡೆಗಟ್ಟುವಂಥ ದಿವ್ಯ ಔಷಧಿಯಾಗಿ ದೇವರು ಕಾಣಿಕೆಯಾಗಿ ನೀಡಿದ್ದಾನೆ. ಅದಕ್ಕಾಗಿ ಎದೆಹಾಲು ಶ್ರೇಷ್ಠ ಎಂಬ ಅಂಶವನ್ನು ತಾಯಂದಿರು ಅರಿತು ಎಲ್ಲರನ್ನೂ ಎದೆ ಹಾಲು ಉಣಿಸುವಂತೆ ಬೆಂಬಲಿಸಿ ಜನಪ್ರಿಯಗೊಳಿಸಬೇಕಾಗಿದೆ ಅಂದಾಗ ಈ ದಿನಾಚರಣೆಗೆ ಒಂದು ಮಹತ್ವ ಬರುತ್ತದೆ ಎಂದು ವಿವರಿಸಿ ಹೆಚ್ಚುತ್ತಿರುವ ಕ್ಯಾನ್ಸರನ್ನು ತಡೆಗಟ್ಟುವುದು ನಿಮ್ಮ ಕೈಯಲ್ಲಿದೆ ಇದು ಅಲ್ಲದೆ ಪ್ರಸವ ನಂತರ ಅಧಿಕ ಕೊಬ್ಬು ಕರಗಿ ತಾಯಿಯ ದೇಹ ಮೊದಲಿನಂತೆ ಆಗುತ್ತದೆ. ಇದು ಅಲ್ಲದೆ ಇದರಂತ ಪರಿಶುದ್ಧ ಹಾಲು ಮತ್ತೊಂದಿಲ್ಲ ಇದು ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ . ಒಳ್ಳೆ ಪೌಷ್ಟಿಕಾಂಶ ಹೊಂದಿದ್ದು ರೋಗ ಮುಕ್ತ ಮಾಡುವ ಶಕ್ತಿ ಇದರಲ್ಲೇ ಅಡಗಿದ್ದು ಇದು ಲಸಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಕೃತಕವಾಗಿ ಏನೇ ಮಾಡಿದರೂ ಅದಕ್ಕೆ ಶ್ರೇಷ್ಠ ಎಂದು ಇನ್ನೂ ತಾಯಂದಿರು ಅರಿಯಬೇಕಾಗಿದೆ.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ದೇವರಾಜ್ ಎಸ್ ಪ್ರಸಾದ್ ಆಯುಷ್ಯ ವೈದ್ಯಾಧಿಕಾರಿಗಳು, ಸೈಯದ್ ಅಸರಾರ್ ಹಾಸಮಿ , ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ ಗಳು, ನೇತ್ರಾಧಿಕಾರಿ ಸುರೇಶ್ ಬಂಡುಗಾರ್, ಕೇಂದ್ರ ಸ್ಥಾನದ ಆರೋಗ್ಯ ನಿರೀಕ್ಷಣಾಧಿಕಾರಿ ಉದಯ್ ಕುಮಾರ್, ರವಿಕಿರಣ್, ಸಂಗೀತ,, ಶಹಬಾಜ, ಶೂಶ್ರುತ ಅಧಿಕಾರಿಗಳು, ಪುಷ್ಪ ಪ್ರಯೋಗ ಶಾಲಾ ತಂತ್ರಜ್ಞರು, ಮಲ್ಲು ಪಿಸ್ತೆ ಔಷಧವಿತರಕರು, ಆರ್ ಕೆ ಎಸ್ ಕೆ ಸಮಾಲೋಚಕರಾದ ಎನ್ ಸುಧಾಕರ್, ಮಲ್ಲಮ್ಮ, ರಾಜು, ಆಶಾ, ಕಾಜು ಪರಿಚಾರಕರುಗಳು, ಹೆರಿಗೆ ಆಗಮಿಸಿದ ತಾಯಿಂದಿರು, ಗರ್ಭಿಣಿ ತಾಯಂದಿರು, ಇತರರು ಭಾಗವಹಿಸಿದ್ದರು.