ಶರಣರಿಂದ ಕಲಬುರಗಿ ಕೈಲಾಸ

0
37

ಕಲಬುರಗಿ : ಮಹಾದಾಸೋಹಿ ಶರಣಬಸವರಿ ಕಲಬುರಗಿಯನ್ನು ಕೈಲಾಸ ಮಾಡಿದ್ದಾರೆ ಎಂದು ಸಾರಂಗಮಠ ಶ್ರೀಶೈಲಂ ಹಾಗೂ ಸುಲಫಲ ಮಠ ಶಹಾಬಜಾರ ಕಲಬುರಗಿಯ ಪೂಜ್ಯ ಶ್ರೀ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

ಶರಣಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರಾವಣ ಮಾಸದ ಕಾಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು, ಶ್ರಾವಣ ಮಾಸ ಎಂದರೆ ಶ್ರವಣ, ಮನನ, ನಿದಿಧ್ಯಾಸ, ಶರಣರು ಕಾಯಕ ಮಾಡುತ್ತಾ ದಾಸೋಹ ಗೈದರು. ನಿರಂತರವಾಗಿ ಬಹಳ ವಷಗಳಿಂದ ಶ್ರಾವಣ ಮಾಸದ ಕಾಯ೯ಕ್ರಮಗಳು ನಡೆಸಿಕೊಂಡು ಬರುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ಶರಣಬಸವೇಶ್ವರ ಸಂಸ್ಥಾನ. ಪೂಜ್ಯ ಡಾ.ಅಪ್ಪಾಜಿಯವರು ಇಂತಹ ಕೊಡುಗೆ ಶ್ಲಾಘನೀಯವಾದದ್ದು ಎಂದರು.

Contact Your\'s Advertisement; 9902492681

ನಂತರ ಬೆಳಗುಂಪಾ ಬೃಹನ್ಮಠದ ಪೂಜ್ಯ ಶ್ರೀ ಅಭಿನವ ಪವ೯ತೇಶ್ವರರು ಗುರು ಲಿಂಗ ಜಂಗಮ ಆರಾಧನೆ ವಿಷಯ ಕುರಿತು ಮಾತನಾಡಿದರು, ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ದಿವ್ಯ ಆಶಿವ೯ಚನ ನೀಡಿದರು. ಚೌದಾಪುರಿ ಹಿರೇಮಠದ ಶ್ರೀ ಷ.ಬ್ರ, ಡಾ,ರಾಜಶೇಖರ ಶಿವಾಚಾಯರು ಮಾತನಾಡಿದರು.

ಕಾಯ೯ಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ದಿವ್ಯ ಸಾನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವಧಕ ಸಂಘದ ಚೇರ್‌ಪಸ೯ನ್‌ ಪೂಜ್ಯ ಮಾತೆ ಡಾ,ದಾಕ್ಷಾಯಣಿ ಎಸ್.‌ ಅಪ್ಪ , ಸಂಸ್ಥೆಯ ಕಾಯದಶಿ೯ ಬಸವರಾಜ ದೇಶಮುಖ, ಡಾ.ಅಲ್ಲಮ ಪ್ರಭು ದೇಶಮುಖ, ಶರಣಬಸವ ವಿವಿಯ ಕುಲಪತಿ ಡಾ.ಅನೀಲಕುಮಾರ ಬಿಡುವೆ, ಡೀನ್‌ ಡಾ.ಲಕ್ಷ್ಮೀ ಮಾಕಾ ಪಾಟೀಲ, ಕುಲಸಚಿವ ಡಾ, ಎಸ. ಎಸ್.‌ ಹೊನ್ನಳ್ಳಿ, ಶರಣಬಸವ ವಿವಿ ಪದಾಧಿಕಾರಿಗಳು, ಡೀನ್‌ರು, ಪ್ರಾಧ್ಯಾಪಕರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾ೯ಯರು ಇದ್ದರು. ಶ್ರೀಮತಿ ಸುಪ್ರೀಯಾ ನಾಗಶೆಟ್ಟಿ ನಿರೂಪಿಸಿದರು, ಡಾ.ಶಿವರಾಜ ಶಾಸ್ತ್ರೀ ಹೇರೂರ್‌ ವಂದಿಸಿದರು. ಕು. ಶಿವಾನಿ ಎಸ್.‌ ಅಪ್ಪ, ಕು.ಕೋಮಲ ಎಸ್.‌ ಅಪ್ಪ, ಕು. ಮಹೇಶ್ವರಿ ಎಸ್.‌ ಅಪ್ಪ ಅವರಉ ವಿಶೇಷ ಪ್ರಾಥ೯ನ ಗೀತೆ ಹಾಡಿದರು. ಶಿವಲಿಂಗ ಶಾಸ್ತ್ರೀ ಗರೂರ ಅವರಿಂದ ಶರಣಬಸವೇಶ್ವರ ಪುರಾಣ ಪ್ರವಚನ ಮಾಡಲಾಯಿತು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here