ಜೇವರ್ಗಿ: ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕೋಟ್ಶಂತರ ರೂ. ಖರ್ಚು ಮಾಡಿ ಶುದ್ಧ ನೀರು ಕೊಡುವ ಆರೋ ಪ್ಲ್ಶಾಂಟ್ ಸ್ಥಾಪಿಸುವ ನೆಪದಲ್ಲಿ ಕೊಟ್ಶಂತರ ರೂ. ಅವ್ಶವಹಾರ ನಡೆಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ಬಣದ ತಾಲೂಕಾಧ್ಶಕ್ಷ ಮಹೇಶ ಕೋಕಿಲೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರುˌ ತಾಲೂಕಿನಲ್ಲಿ ಕೊಟ್ಶಂತರ ರು. ಖರ್ಚು ಮಾಡಿ 2013-14 ಮತ್ತು 2014-15ರಲ್ಲಿ ಸ್ಥಾಪಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಿಸಬೇಕಿದ್ದ ಗುತ್ತಿಗೆದಾರರು ಹಣ ಡ್ರಾ ಮಾಡಿಕೊಂಡು ಹೋಗಿದ್ದಾರೆ. ಬಹುತೇಕ ಘಟಕಗಳು ತಿಪ್ಪೆಗುಂಡಿಯ ಹತ್ತಿರ ಇಲ್ಲವೇ ಗ್ರಾಮದಿಂದ ಬಹುದೂರ ಹಾಕಿ ನಿರುಪಯುಕ್ತ ಮಾಡಿದ್ದಾರೆ.
ಜವಳಗಾ(ಬಿ) ಗ್ರಾಮದಲ್ಲಿ ರೈತರು ತೊಗರಿ ಹೊಟ್ಟು ತುಂಬಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೊಟ್ಶಂತರ ರೂ. ವ್ಶವಹಾರ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬರೀ ಶೆಡ್ ಮಾತ್ರ ಸ್ಥಳದಲ್ಲಿಟ್ಟು ಹಣ ಡ್ರಾ ಮಾಡಿಕೊಂಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕೆಲಸ ನಿಲ್ಲಿಸಿದ ಘಟಕಗಳು ಪುನ: ಪ್ರಾರಂಭಿಸಬೇಕು. ಅಲ್ಲದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಅವ್ಶವಹಾರದಲ್ಲಿ ಭಾಗಿಯಾಗಿದ್ದಾರೆ. ಅವ್ಶವಹಾರದಲ್ಲಿ ಭಾಗಿಗಳಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕೂಡಲೇ ಸ್ಥಗಿತವಾಗಿರುವ ಶುದ್ಧ ನೀರಿನ ಘಟಕಗಳು ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕ ಸುಭಾಷ ಎನ್ ಆಲೂರˌ ಸಂಗಪ್ಪ ಹರನೂರˌ ರವಿ ಬಿ ಸರಕಾರˌ ವಿಶ್ವರಾಧ್ಯಾ ಗೋಪಾಲಕರ್ˌ ಯಮನೇಶ ಅಂಕಲಗಿˌ ಅಬ್ದುಲ್ ಘನಿ ಜೇವರ್ಗಿ(ಕೆ)ˌ ಭೀಮಾಶಂಕರ ಹಂಗರಗಾ (ಬಿ)ˌ ಭೀಮರಾಯ ಜೇವರ್ಗಿ(ಕೆ)ˌ ಭೀಮರಾಯ ಹರನಾಳ (ಬಿ)ˌ ಬಲಭೀಮ ಹರವಾಳ ಜೇವರ್ಗಿ(ಕೆ) ಸೇರಿದಂತೆ ಅನೇಕರು ಇದ್ದರು.