ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಬ್ ಟ್ಯಾಪ್ ವಿತರಣೆ

0
57

ಕಲಬುರಗಿ: ನಗರದ ವಿಶ್ವೇಶ್ವರ‌ಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಸಮುದಾಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 74 ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಬಸವರಾಜ ಗಾದ್ಗೆಯವರು ಅವರು ಮಾತನಾಡಿ, ಈ ಭಾಗದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ 74 ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ, ಮತ್ತು ಕಲಿಕಾ ಪದ್ದತಿಯಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿ ಈ ನಿರ್ಧಾರವನ್ನು ವಿಟಿಯು ತೆಗೆದುಕೊಂಡಿದೆ. ಎಂದು ಹೇಳಿದರು.

Contact Your\'s Advertisement; 9902492681

ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಮತ್ತು ಅಭಿವೃದ್ಧಿಹೊಂದಿ ಮುಂದುವರಿಯಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿರುವ ನಾಲ್ಕು ವಿಟಿಯು ಪ್ರಾದೇಶಿಕ ಕೇಂದ್ರಗಳ ಪೈಕಿ ಅತಿ ಹೆಚ್ಚು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಕಲಬುರಗಿ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅವರ ಅಧ್ಯಯನಕ್ಕೆ ನೆರವಾಗಲು ಉಚಿತ ಲ್ಯಾಪ್‌ಟಾಪ್‌ ವಿತರಣೆ ಯೋಜನೆಯನ್ನು ಕುಲಪತಿಗಳಾದ ಡಾ.ಎಸ್. ವಿದ್ಯಾಶಂಕರ್ ಅವರ ಮಾರ್ಗದರ್ಶನದ ಮೇರೆಗೆ ಅನುಷ್ಠಾನಗೊಳಿಸಲಾಗುತ್ತಿದೆ. ಎಂದರು.

2016ರಿಂದಲೇ ವಿಟಿಯುನಲ್ಲಿ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುತ್ತಿದೆ. ಈ ಅವಕಾಶ ಬಳಸಿಕೊಂಡು ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಇಂದು ಹಲವು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಎಸ್ ವಿದ್ಯಾಶಂಕರ, ಕುಲಸಚಿವ ಡಾ.ಪಿ.ಎಂ.ರಂಗಸ್ವಾಮಿ , ಕುಲಸಚಿವ ಮೌಲ್ಯಮಾಪನ ಡಾ.ಪಿ.ಎಂ. ಶ್ರೀನಿವಾಸ, ಡಾ.ಪ್ರಶಾಂತ ನಾಯಕ್ ಉ., ಹಣಕಾಸಿ ಲೈಜನ್ ಆಫೀಸರ್ ಡಾ. ಪ್ರಹ್ಲಾದ ರಾಠೋಡ, ವಿತಾವಿ ಬೆಳಗಾವಿ ಇವರಿಗೆ ಅಭಿನಂದನೆಗಳು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭಿಯೋಜಕರಾದ ಪ್ರೊ. ರಾಹುಲ ಮೂಲಭಾರತಿ, ವಿಶೇಷಾಧಿಕಾರಿಗಳು ಶೈಕ್ಷಣಿಕ ವಿಭಾಗ ಡಾ. ಶಂಭುಲಿಂಗಪ್ಪ, ಅವಿಷ್ಕಾರ್ ಮತ್ತು ಬೆಳವಣಿಗೆಯ ವಿಶೇಷ ಅಧಿಕಾರಿಗಳಾದ ಡಾ. ಶುಭಾಂಗಿ ಪಾಟೀಲ್, ಕೌಶಲ್ಯ ಅಭಿವೃದ್ಧಿ ಅಭಿಯೋಜಕರಾದ ಡಾ. ಶೈಲಜಾ ಖೇಣಿ, ಡಾ. ಬ್ರಿಜಭೂಷಣ, ಸಂಯೋಜಕರು ಸಿ ವಿಲ್ ಇಂಜಿನಿಯರಿಂಗ್ ವಿಭಾಗ, ಡಾ. ಬಾಬುರೆಡ್ಡಿ ಸಂಯೋಜಕರು ಎಂ.ಎ. ಡಿ ವಿಭಾಗ ಡಾ. ಮಹಮದ್ ಅಬ್ದುಲ್ ವಹೀದ್ ಕಂಪೂಟರ್ ಸೈನ್ಸ್ ವಿಭಾಗ, ಡಾ. ಜನನ ಸತೀಶ ಉಪಳಾಂವಕರ ಸಂಯೋಜಕರು ಎಂ.ಬಿ.ಎ. ವಿಭಾಗ ಮತ್ತು ಭೋದಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here