ಕಲಬುರಗಿ: ಶ್ರಾವಣ ಮಾಸ ನಿಮಿತ್ತವಾಗಿ ನಗರದ ಗಂಗಾನಗರದ ಹನುಮಾನ್ ದೇವಸ್ಥಾನ ಆವರಣದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ಗಂಗಾನಗರ ವತಿಯಿಂದ ನಡೆಯುತ್ತಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮದ 5ನೆಯ ದಿನವಾದ ಶುಕ್ರವಾರ ಸಂಜೆ ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ನಾಮಕರಣ ತೊಟ್ಟಿಲು ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಬಡಾವಣೆಯ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು, ಹೆಣ್ಣುಮಕ್ಕಳು ಆಗಮಿಸಿ ತೊಟ್ಟಿಲು ತೂಗುತ್ತ ಪದಗಳನ್ನು ಹಾಡಿದರು.ಇದಕ್ಕೂ ಮೊದಲು ತೊಟ್ಟಿಲಿಗೆ ಅಲಂಕಾರ ಮಾಡಿ ಪೂಜೆ ನೆರವೇರಿಸಿ, ಮುತ್ತೈದೆ ಹೆಣ್ಣು ಮಕ್ಕಳಿಗೆ ಸೀರೆ ಉಡಿಸುವ ಶಾಸ್ತ್ರೋತ್ಸವಾಗಿ ಜರುಗಿತು .ನೆರೆದಿದ್ದ ಜನರಿಂದ ಶ್ರೀ ದಾನಮ್ಮ ದೇವಿ ಮಾತಾ ಕೀ ಜೈ ಮಾತಾ ಮಾಣಿಕೆಶ್ವರಿ ಕಿ ಜೈ ಎಂದು ಘೋಷಣೆಗಳು ಮೊಳಗಿದವು.
ವೇ.ಮೂ.ಪಂಡಿತ ಸಿದ್ಧೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರ್ ಪುರಾಣಿಕರು ಮಾತನಾಡಿ ಸರಳತೆ ಜೊತೆಗೆ ಕಾಯಕ ಗುಣವು ಶಿವಶರಣೆ ಯರಲ್ಲಿ ಕಾಣುತ್ತೆವೆ
ದೇವರನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಬೇಕು ಉಮರಾಣಿಯಲ್ಲಿ ಜನಿಸಿ ಗುಡ್ದಾಪುರದಲ್ಲಿ ನೆಲೆಸಿ ಬಂದ ಭಕ್ತರಿಗೆ ನಿರಂತರ ದಾಸೋಹ ನಡೆಸಿ ಬೇಡಿದವರಿಗೆ ಬೇಡಿದನ್ನು ಕರುಣಿಸಿದ ಮಹಾತಾಯಿ ಶ್ರೀ ದಾನಮ್ಮ ದೇವಿಯ ನಾಮಕರಣ ಮಾಡುವ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟಿರುವ ಸತ್ಸಂಗ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು .
ಕೋಲಿ ಸಮಾಜದ ಹಿರಿಯ ಮುಖಂಡರಾದ ಅಮೃತ ಎಚ್.ಡಿಗ್ಗಿ ಅವರು ಮಾತನಾಡಿ ಗಂಗಾನಗರದಲ್ಲಿ ನಡೆದ ತೊಟ್ಟಿಲು ಕಾರ್ಯಕ್ರಮ ಐತಿಹಾಸಿಕವಾಗಿದೆ.ಗುಡ್ಡಾಪುರ್ ಶ್ರೀ ದಾನಮ್ಮ ದೇವಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ, ಇಪ್ಪತ್ತೊಂದು ದಿನಗಳ ನಿರಂತರವಾಗಿ ಹಮ್ಮಿಕೊಂಡಿರುವ ಪುರಾಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಅನಿಲ್ ಎನ್. ಕೂಡಿ ಕಾರ್ಯದರ್ಶಿ ಅಶೋಕ ಎಸ್.ಬಿದನೂರ್ ಸತ್ಸಂಗ ಸಮಿತಿಯ ಎಲ್ಲ ಪದಾಧಿಕಾರಿಗಳು ವಿವಿಧ ಬಡಾವಣೆಗಳ ಅನೇಕ ಮಹಿಳೆಯರು, ಹಿರಿಯರು ಮುದ್ದುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಗೀತ ಸೇವೆಯನ್ನು ಬಾಬುರಾವ್ ಕೋಬಾಳ್, ತಬಲಾ ಮಹಾಂತೇಶ ಹರವಾಳ್ ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಸಂದೇಶ್ ಟಿ. ಕಮಕನೂರ್. ವೆಂಕಟೇಶ್ ಮರ್ತೂರ್. ಆನಂದ್ ಹೇರೂರು. ಮಲ್ಲಿಕಾರ್ಜುನ್ ವಾಲಿಕಾರ್. ನಾಗೇಂದ್ರ ಹರವಾಳ. ನಾಗರಾಜ್ ಬಿರಾದಾರ್. ಮಲ್ಲಿಕಾರ್ಜುನ ವೈ. ಕೂಡಿ ಶಾಂತಪ್ಪ ಕೂಡಿ. ವಿಜಯಕುಮಾರ್ ಹದಗಲ್. ರಾಯಪ್ಪ ಹೋನಗುಂಟಿ, ಶ್ರೀಕಾಂತ್ ಆಲೂರ್, ಶರಣು ಎಸ್, ಕೌಲಗಿ, ಸಿದ್ದರಾಮ ಕೋಬಾಳ್, ಸಂತೋಷ ಹುಳಗೇರಿ, ಉಮೇಶ್ ಹದಗಲ್, ಜಗದೇವಪ್ಪ ನಡುವಿನಹಳ್ಳಿ, ಬಾಬಾಸಾಹೇಬ ಕೂಡಿ ಮುಂತಾದವರು ಇದ್ದರು.