ಕಲಬುರಗಿ: ಕಲ್ಯಾಣ ನಾಡಿನ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ದಶಕಗಳ ಹೋರಾಟವನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಕ ಅವರಿಗೆ ಸಂದ ಗೌರವವಾಗಿದೆ ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಬಣ್ಣಿಸಿದರು.
ಜಯನಗರದ ಶಿವಮಂದಿರದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮಣ ದಸ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಸಮಾಜ ಸೇವೆಯು ನಿಸ್ವಾರ್ಥ ಸೇವೆ ಆಗಿದೆ.ಇಗಿನ ಕಾಲದಲ್ಲಿ ಸೇವಾ ಮನೋಭಾವದ ಜನರು ಬಹಳ ವಿರಳ.ಸ್ವಾರ್ಥಕ್ಕಾಗಿ, ಫಲಾಪೇಕ್ಷೆಗಾಗಿ ಮಾಡುವ ಕಾರ್ಯ ಸೇವೆ ಆಗುವುದಿಲ್ಲ.ಆದರೆ ತಮ್ಮ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟ ದಸ್ತಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಲಕ್ಷ್ಮಣ ದಸ್ತಿ ಇಂದು ಹೋರಾಟ ಕ್ಷೇತ್ರದಲ್ಲಿರುವವರನ್ನು ಗುರುತಿಸುವುದು ಕಷ್ಟ.ಅಂಥದರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ನನ್ನನ್ನು ಗೌರವ ಡಾಕ್ಟರೇಟ್ ನೀಡಿದೆ.ಅದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ.ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿ.ಎಸ್.ಗುಳಶೆಟ್ಪಿ,ಸಾಲೋಮನ ದೀವಾಕರ,ಜಿ.ಜಿ.ವಣಿಕ್ಯಾಳ, ವಿಶ್ವನಾಥ ಪಾಟೀಲ ಗೌನಳ್ಳಿ,ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಪದಾಧಿಕಾರಿಗಳಾದ ಬಸವರಾಜ ಮಾಗಿ,ಬಂಡಪ್ಪ ಕೇಸೂರ, ಶಿವಕುಮಾರ್ ಪಾಟೀಲ, ಸಿದ್ಧಲಿಂಗ ಗುಬ್ಬಿ, ಎಂ.ಡಿ.ಮಠಪತಿ,ಭೀಮಾಶಂಕರ ಶೆಟ್ಟಿ,ಮನೋಹರ ಬಡಶೇಷಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಬಸವರಾಜ ಅನ್ವರಕರ, ನಾಗರಾಜ ಖೂಬಾ, ಬಸವರಾಜ ಪುರ್ಮಾ, ಮಹಿಳಾ ಸದಸ್ಯೆಯರಾದ ಅನುರಾಧ ಕುಮಾರಸ್ವಾಮಿ,ಸುಜತಾ ಭೀಮಳ್ಳಿ, ಶೈಲಜಾ ವಾಲಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ,ಮುಖಂಡರಾದ ಬಾಬುರಾವ ಪಾಟೀಲ,ಪ್ರಭು ಪಾಟೀಲ, ಮಲ್ಲಿನಾಥ ಸಂಗಶೆಟ್ಟಿ, ಪರಮೇಶ್ವರ ಹಡಪದ,ಅಮೀತ ನಾಗನಹಳ್ಳಿ, ಶರಣಬಸಪ್ಪ ಮಂಗಳೂರು, ಮಲ್ಲಯ್ಯ ಸ್ವಾಮಿ ಬೀದಿಮನಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.