ಗೃಹಲಕ್ಷ್ಮೀ ಯೋಜನೆ ಮತ್ತು ಗ್ಯಾರಂಟಿ ಯೋಜನೆಯ ಪೂರ್ಣ ಮಾಹಿತಿ ಪಡೆಯಿರಿ; ಪಾಶಾ

0
28
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ಗೃಹಲಕ್ಷ್ಮಿ ಯೋಜನೆ ಮತ್ತು ಗ್ಯಾರಂಟಿ ಯೋಜನೆ ಕುರಿತು ಪೂರ್ಣ ಮಾಹಿತಿ ಪಡೆಯಬೇಕು ಎಂದು ತಾಪಂ ಇಒ ಮಹ್ಮದ್ ಅಕ್ರಂ ಪಾಶಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಸಲಹೆ ನೀಡಿದರು.

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆಯಿಂದ ಎಷ್ಟು ಅಂಗನವಾಡಿ ಕೇಂದ್ರಗಳು ಹಾನಿ ಆಗಿವೆ. ಅಲ್ಪಸ್ವಲ್ಪ ಮಟ್ಟದ ಹಾನಿಗೆ ರಿಪೇರಿ ಮಾಡಿ, ಹೆಚ್ಚಿನ ರೀತಿಯಲ್ಲಿ ಹಾನಿ ಆದಲ್ಲಿ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಸೂಚಿಸಿದರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಮಾತನಾಡಿ, ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಉಳಿದ ಸಮವಸ್ತ್ರಗಳನ್ನು ಒಂದು ವಾರದಲ್ಲಿ ವಿತರಿಸಲಾಗುವುದು ಎಂದು ಹೇಳಿದರು.
ಈಗಗಾಲೇ ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ. ವಾರದೊಳಗೆ ಶೂ, ಸಾಕ್ಸ್ ಹಾಗೂ ಉಳಿದ ಸಮವಸ್ತ್ರ ಖರೀದಿ ಮಾಡಿ ವಿತರಿಸಲು ಆಯಾ ಶಾಲೆಯ ಮುಖ್ಯಗುರುಗಳಿಗೆ ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳ ಕುರಿತು ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ವಿಶೇಷ ಕ್ಲಾಸ್ ನಡೆಸಲಾಗುತ್ತಿದೆ. ಕನ್ನಡ ಸೇರಿ ಉಳಿದ ವಿಷಯಗಳು ವಾರಕ್ಕೆ ಒಂದು ಸಲ ವಿಶೇಷ ಕ್ಲಾಸ್ ನಡೆಸಲಾಗುತ್ತಿದೆ ಎಂದರು.

ಕಳೆದ ಬಾರಿಗಿಂತ ಈ ಬಾರಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ನೋಂದಣಿ ಮಾಡಿಸಿದ್ದಾರೆ ಎಂದು ಕೃಷಿ ಸಹಾಯಕ ನಿರ್ದೇಶಕ ಸಂಜೀವ ಕುಮಾರ ಮಾನಕರ್ ಮಾಹಿತಿ ನೀಡಿದರು.

ತಾಲೂಕಿನಲ್ಲಿ ವಸತಿ ನಿಲಯಗಳ ಸ್ವಂತ ಕಟ್ಟಡಗಳು ಸರಿ ಇರದಿದ್ದರೆ ಬಾಡಿಗೆ ಕಟ್ಟಡಗಳಿಗೆ ವರ್ಗಾವಣೆ ಮಾಡಿ, ನಮಗೆ ಶಿಕ್ಷಣ ಜತೆಗೆ ವಿದ್ಯಾರ್ಥಿಗಳ ರಕ್ಷಣೆ ಸಹ ಮುಖ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ಜಿಲ್ಲಾ ನಗರ ಅಭಿವೃದ್ಧಿ ಯೋಜನಾ ನಿರ್ದೇಶಕ ಹಾಗೂ ತಾಪಂ ಆಡಳಿತ ಅಧಿಕಾರಿ ಮುನಾವರ ದೌಲಾ ಸೂಚಿಸಿದರು.

ಚಿತ್ತಾಪುರ, ಶಹಾಬಾದ ಸೇರಿ ವಿವಿಧೆಡೆ ಮಲೇರಿಯಾ, ಡೆಂಗೆ ಕುರಿತು ಎಲ್ಲಾ ರೀತಿಯ ಜಾಗೃತಿ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ರಾವೂರ್, ಗೋಳಾ(ಬಿ) ನಲ್ಲಿ ಹೆಚ್ಚು ಡೆಂಗೆ ಕೇಸ್ ಪತ್ತೆಯಾಗುತ್ತಿವೆ. ಆರೋಗ್ಯ ಇಲಾಖೆ ತಮ್ಮ ವಿಶೇಷ ತಂಡ ರಚಿಸಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಹಾಬಾದ್ ತಾಪಂ ಇಒ ಮಲ್ಲಿನಾಥ ರಾವೂರ್ ಸಲಹೆ ನೀಡಿದರು.

ತಾಲೂಕಿನಲ್ಲಿ ಬೀದಿನಾಯಿಗಳ ಹಾವಾಳಿ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಲು ಮೈಸೂರನಿಂದ ವಿಶೇಷ ತಂಡ ಬಂದಿದೆ ಹಾಗೂ ಪಶು ಸಂಗೋಪನೆ ಇಲಾಖೆ ಕುರಿತು ವಿವಿಧ ಯೋಜನೆಗಳ ಬಗ್ಗೆ ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶಂಕರ ಕಣ್ಣಿ ತಿಳಿಸಿದರು.

ತಾಲೂಕ ಆಡಳಿತ ಅಧಿಕಾರಿ ಮುನಾವರ ದೌಲಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಮಹ್ಮದ ಆಕ್ರಂ ಪಾಶಾ, ಶಹಬಾದ ತಾಪಂ ಇಒ ಮಲ್ಲಿನಾಥ ರಾವೂರ, ತಾಪಂ ಯೋಜನಾ ಅಧಿಕಾರಿ ಮುಬಾಶೀರ ಅಲಿ, ತಾಪಂ ಸಹಾಯಕ ನಿರ್ದೇಶಕರಾದ ಪಂಡಿತ ಶಿಂಧೆ, ಶ್ರೀಮಂತ ಸಂಗಾವಿ, ವ್ಯವಸ್ಥಾಪಕ ಅಮೃತ್ ಕ್ಷೀರಸಾಗರ, ಅನೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here