ಸುರಪುರ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕರೆ ನೀಡಿದಂತೆ ಎಲ್ಲರು ಒಂದು ಸಸಿಯನ್ನು ತಾಯಿಯ ಹೆಸರಲ್ಲಿ ನೆಟ್ಟು ಅದನ್ನು ತಾಯಿ ಸೇವೆ ಎಂದೆ ಭಾವಿಸಿ ರಕ್ಷಣೆ ಮಾಡಿ ಪರಿಸರ ಬೆಳೆಸೋಣ ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು.
ನಗರದ ಯಲ್ಲಪ್ಪ ಬಾವಿ ಬಳಿಯ ಉದ್ಯಾನವನದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನದ ಅಂಗವಾಗಿ ಸಸಿ ನೆಟ್ಟು ಅದಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ,ಎಲ್ಲರಿಗೂ ತಾಯಿ ಎಂದರೆ ಪೂಜ್ಯನಿಯ ಭಾವನೆ ಮೂಡುತ್ತದೆ,ಅದೇ ತಾಯಿಯ ಹೆಸರಲ್ಲಿ ಒಂದು ಸಸಿ ನೆಟ್ಟು ಬೆಳೆಸುವುದರ ಮೂಲಕ ಪರಿಸರ ಉಳಿಸಿ ಬೆಳೆಸಿದಂತಾಗಲಿದೆ.ಆದ್ದರಿಂದ ಈ ಅಭಿಯಾನದ ಮೂಲಕ ಎಲ್ಲರು ಸಸಿಗಳ ನೆಟ್ಟು ಬೆಳೆಸಲು ಮುಂದಾಗೋಣ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸುನೀಲ್ ರಾಠೋಡ್,ತಾಂತ್ರಿಕ ಸಂಯೋಜಕರಾದ ಶಿವಯೋಗಿ ಹಿರೇಮಠ,ಸಹಾಯಕ ಲೆಕ್ಕಾಧಿಕಾರಿ ನಾಗರಾಜ್,ಐಇಸಿ ಸಂಯೋಜಕ ಮಲ್ಲಿಕಾರ್ಜುನ ದೇವಾಪುರ ಸೇರಿದಂತೆ ತಾಲೂಕ ಪಂಚಾಯತಿಯ ಅನೇಕ ಜನ ಸಿಬ್ಬಂದಿಗಳು ಭಾಗವಹಿಸಿದ್ದರು.