ರಾಘವೇಂದ್ರಸ್ವಾಮಿಗಳ ಆರಾಧನೆ ವಿಜೃಂಭಣೆಯ ರಥೋತ್ಸವ

0
24

ಸುರಪುರ: ನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ 109ನೇಯ ರಾಯರ ಆರಾಧನೆ ಮಹೋತ್ಸವವನ್ನು ಮೂರು ದಿನಗಳವರೆಗೆ ಭಕ್ತಿ-ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಉತ್ತರರಾಧನೆಯಂದು ಗುರುರಾಜ ಭಜನಾ ಮಂಡಳಿಯವರ ಭಜನೆಯೊಂದಿಗೆ ರಥೋತ್ಸವ ಭವ್ಯವಾಗಿ ಜರುಗಿತು.

ಡಾ.ಬಿ.ಆರ್.ಜಹಗೀರದಾರ,ನಾರಾಯಣಾಚಾರ್ಯ ಐಜಿ,ನರಸಿಂಹಮೂರ್ತಿ ಡಬೀರ,ವೆಂಕೋಬಾಚಾರ್ಯ ಬೀರನೂರು,ಶ್ರೀಧರಾಚಾರ್ಯ ಬೂದುರು, ರಾಘವೇಂದ್ರರಾವ ಬಾಡಿಯಾಲ, ಕೃಷ್ಣಮೂರ್ತಿ ಭಕ್ರಿ, ಅರ್ಚಕರಾದ ವಾದಿರಾಜ ಬೂದುರು,ರಾಮಾಚಾರ್ಯ ಜೋಷಿ, ವಾಸುದೇವಾಚಾರ್ಯ ಐಜಿ, ಸೀತಾರಾಮಾಚಾರ್ಯ ಐಜಿ,ಗುರುರಾಜ ಪಾಲ್ಮೂರು,ಮಧುಸೂಧನ ಡಬೀರ,ನರಸಿಂಹರಾವ ಬಡಶೇಷಿ,ನರಸಿಂಹರಾವ ಬಾಡಿಯಾಳ,ಪ್ರಲ್ದಾದ ಬೀರನೂರು,ವೆಂಕಟೇಶ ಭಕ್ರಿ,ನರಸಿಂಹ ಭಂಡಿ,ಬಾದರಾಯಣ ಪಾಲ್ಮೂರು,ವಾಸುದೇವ ದೇವಿಕೇರಿ,ಗುರುರಾಜ ಬಾಡಿಯಾಳ,ವೆಂಕಟೇಶ ಆವಂಟಿ,ಮಿಥುನ್ ಬಾಡಿಯಾಳ,ರಾಘವೇಂದ್ರ ಭಕ್ರಿ,ಸತ್ಯಬೋಧ ಬೂದುರು,ಶ್ರೀನಿಧಿ ಐಜಿ,ಶ್ರೀಕರ ಐಜಿ,ಹರೀಶ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಸಂಗೀತ ಪ್ರವಚನ; ಮೂರು ದಿನಗಳ ನಡೆದ ರಾಯರ ಆರಾಧನೆ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಅಷ್ಟೋತ್ತರ,ಪಂಚಾಮೃತ ಅಭಿಷೇಕ,ಅಲಂಕಾರ,ನೈವೇದ್ಯ,ಹಸ್ತೋದಕ ಅನ್ನ ಸಂತರ್ಪಣೆ ಹಾಗೂ ಭಜನೆಯೊಂದಿಗೆ ವಾಹನೋತ್ಸವ ಕಾರ್ಯಕ್ರಮಗಳು ನಡೆದವು. ಪ್ರವಚನ ಕಾರ್ಯಕ್ರಮಗಳಲ್ಲಿ ಮಾಧವಾಚಾರ್ಯ ಜೋಷಿ ಕಲಬುರಗಿ, ವೆಂಕಣ್ಣಚಾರ್ಯ ಪೂಜಾರ ಮಳಖೇಡ ಹಾಗೂ ಹನುಮೇಶಾಚಾರ್ಯ ಪಾಲ್ಮೂರ ಪ್ರವಚನ ನೀಡಿದರು ಹಾಗೂ ಪರಿಮಳಾ ಗಿರಾಚಾರ್ಯ ಬಾಗಲಕೋಟ ಇವರಿಂದ ದಾಸವಾಣಿ ಹಾಗೂ ಗಾಯತ್ರಿಭಟ್ ಶಿರಸಿ ಇವರಿಂದ ಹರಿ ಕೀರ್ತನೆ ಹಾಗೂ ಉತ್ತರಾರಾಧನೆಯಂದು ಶ್ರೀ ರಘುವೀರ ರಾಮಧ್ಯಾನ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಾಗೂ ರಾತ್ರಿ ಹಿರಿಯ ಸಂಗೀತ ಕಲಾವಿದರಾದ ರಾಘವೇಂದ್ರ ಗುಡಿ ಧಾರವಾಡ ಅಧ್ಯಕ್ಷತೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

ಸಂಗೀತ ಕಲಾವಿದರಾದ ಸುಧಾ ಜೋಷಿ,ಪ್ರಸನ್ನ ಗುಡಿ ಹಾಗೂ ಶ್ರೀಲಕ್ಷ್ಮೀ ದೇಶಪಾಂಡೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ನರಸಿಂಹ ಕುಲಕರ್ಣಿ ಹಾರ್ಮೋನಿಯಂ ಹಾಗೂ ಜಯರಾವ ಸಗರ ಹಾಗೂ ಗುರುರಾಜ ಪುರೋಹಿತ ಹೈದ್ರಾಬಾದ ತಬಲಾ ಸಾಥ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here