ಕಲಬುರಗಿ: ಬಂಡಾಯ, ಸಮಾಜಿಕ ಸಂವೇದನೆಯ ಜೊತೆಗೆ ನವಿರಾದ ಪ್ರೇಮದ ನಿವೇದನೆ ಕಂಡು ಬಂದಿತು
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಹೇಳಿದರು.
ಕರ್ನಾಟಕ ಗಜಲ್ ಅಕಾಡೆಮಿ, ಗುಲ್ಬರ್ಗ ವಿಶ್ವ ವಿದ್ಯಾಲಯ ಸಯಯೋಗದಲ್ಲಿ ಗುವಿಕ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಭಾನುವಾರ ನಡೆದ ಗಜಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಜಲ್ ಗಳಿಗೆ ವಚನಗಳ ಸ್ಪರ್ಶ ಬೇಕಿದೆ ಎಂದರು.
ಬುದ್ಧನ ಧ್ಯಾನಸ್ಥ ಮನಸ್ಸು, ಬಸವಣ್ಣನವರ ಕಾಯಕ, ಅಂಬೇಡ್ಕರ್ ಅವರ ಸಾಮಾಜಿಕ ಕಳಕಳಿ ಬೇಕಿದೆ. ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆ ವಿರುದ್ಧದ ಗಜಲ್ ಗಳನ್ನು ಬರೆದು ಮುಂದಿನ ಪೀಳಿಗೆಗೆ ಭಾರತದ ಭವಿಷ್ಯ ಕಟ್ಟಿಕೊಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಮುಖ್ಯ ಅತಿತಯಿಯಾಗಿದ್ದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಿದ್ಧರಾಮ ಹೊನ್ಕಲ್ ಮಾತನಾಡಿದರು.
ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ ವೇದಿಕೆಯಲ್ಲಿ ಇದ್ದರು. ಡಾ. ಕಪಿಲ್ ಚಕ್ರವರ್ತಿ ನಿರೂಪಿಸಿದರು.