ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ನೂತನವಾಗಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾದ ರಾಜಶೇಖರ ಬಿ.ಸಿರಿ ಜೇವರ್ಗಿ, ಸಂತೋಷ ಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಸನ್ಮಾನ ಶರಣಕುಮಾರ ಮೋದಿ ನೆಲೋಗಿ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಕುಮಾರ ಬಿ. ಬಿಲ್ಲಾಡ (ಸಾಹು), ನೆಲೋಗಿ, ರಾಜಕೀಯ ಮತ್ತು ಸಾಮಾಜಿಕ ಮುಖಂಡ ವೀರೇಶ ಎಸ್ . ಪಾಟೀಲ ನರಭೋಳ, ಗೌಡಪ್ಪಗೌಡ ಪಾಟೀಲ ಆಂದೋಳ ಅವರೊಂದಿಗೆ ಸನ್ಮಾನ ಮಾಡಲಾಯಿತು.
ಗಾಣಿಗ ನೌಕರರ ಕಲ್ಯಾಣ ಸಂಘ ಅಧ್ಯಕ್ಷ ಸಂಗನಗೌಡ ಪಾಟೀಲ ಕಲ್ಲೂರ, ಜೇವರ್ಗಿ ಯಡ್ರಾಮಿ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿದ್ಧು ಸಾಹು ಅಂಗಡಿ ಜೇವರ್ಗಿ ಹಾಗೂ ಸಮಾಜದ ಧುರೀಣರು , ಸಮಾಜದ ಮುಖಂಡರು ಮತ್ತು ಯುವಕರು ಇತರರು ಉಪಸ್ಥಿತರಿದ್ದರು.