ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಅಭಿಯಾನ

0
20

ಸುರಪುರ: ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಎಲ್ಲರ ಜವಬ್ದಾರಿಯಾಗಿದೆ,ಇದರ ನಿರ್ಮೂಲನೆಗಾಗಿ ಆಗಸ್ಟ್ 1 ರಿಂದ 31ರ ವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಸಲಾಗುತ್ತಿದೆ ಎಂದು ಸುರಪುರ ನ್ಯಾಯಾಲಯದ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ಅವರು ತಿಳಿಸಿದರು.

ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ,ತಾಲೂಕ ನ್ಯಾಯವಾದಿಗಳ ಸಂಘ,ತಾಲೂಕ ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಭಿಯಾನದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಯಾರಾದರು ಬಾಲ ಕಾರ್ಮಿಕರನ್ನು ಕಂಡಲ್ಲಿ ತಕ್ಷಣ ಅಧಿಕಾರಿಗಳಿಗೆ ತಿಳಿಸಿ ಅಥವಾ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ತಪ್ಪು,ಇದಕ್ಕೆ ಕಾನೂನಲ್ಲಿ ಕಠಿಣ ಶಿಕ್ಷೆ ಎಂದು ತಿಳಿಸಿ.ಅಲ್ಲದೆ ಮಕ್ಕಳು ನಿಮ್ಮ ಅಕ್ಕ ಪಕ್ಕದ ಮನೆಗಳಲ್ಲಿ 6 ರಿಂದ 14 ವರ್ಷದೊಳಗಿನ ಅಥವಾ 14 ರಿಂದ 18 ವರ್ಷದೊಳಗಿನ ಕಿಶೋರ ಬಾಲ ಕಾರ್ಮಿಕರು ಕಂಡಲ್ಲಿ ಅವರಿಗೂ ಶಾಲೆಗೆ ಬರುವಂತೆ ತಿಳಿಸಬೇಕು ಎಂದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ಕೆ.ವಿಜಯಕುಮಾರ ಮಾತನಾಡಿ,ಬಾಲ ಕಾರ್ಮಿಕ ಪದ್ಧತಿ ಎನ್ನುವುದು ಸಮಾಜದಲ್ಲಿ ಅನಿಷ್ಠ ಪದ್ಧತಿ ಇದ್ದಂತೆ,ಯಾರಾದರು ಬಾಲ ಕಾರ್ಮಿಕರನ್ನು ಕಂಡಲ್ಲಿ ನನಗೆ ಕರೆ ಮಾಡಿ ಮಾಹಿತಿ ನೀಡಿ,ನಾನೆ ಸ್ಥಳಕ್ಕೆ ಬಂದು ಬಾಲ ಕಾರ್ಮಿಕರ ಪೋಷಕರಲ್ಲಿ ಜಾಗೃತಿ ಮೂಡಿಸಿ ಶಾಲೆಗೆ ಕಳುಹಿಸಲು ತಿಳಿಸೋಣ ಎಂದರು.

ಉಪನ್ಯಾಸಕರಾಗಿ ಭಾಗವಹಿಸಿದ್ದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್,ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ ಹಿರೇಮಠ ಮಾತನಾಡಿ,ಬಾಲ ಕಾರ್ಮಿಕರನ್ನು ಕಂಡಲ್ಲಿ ತಕ್ಷಣ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಅಲ್ಲದೆ ಯಾರಾದರು ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟು ಕೊಂಡಿದ್ದರೆ ಅಂತವರ ವಿರುದ್ಧ 20 ಸಾವಿರ ದಿಂದ 50 ಸಾವಿರ ರೂಪಾಯಿಗಳ ವರೆಗೆ ದಂಡ ಹಾಗೂ 6 ತಿಂಗಳಿಂದ 2 ವರ್ಷಗಳ ಜೈಲು ಶಿಕ್ಷೆ ಆಗಲಿದೆ ಎಂದರು.

ಅಲ್ಲದೆ ಮಕ್ಕಳು ನಿಮ್ಮ ಅಕ್ಕ ಪಕ್ಕದಲ್ಲಿ ಎಲ್ಲಿಯಾದರು ಬಾಲ ಕಾರ್ಮಿಕರನ್ನು ಕಂಡಲ್ಲಿ ಕರೆ ಮಾಡಿ ತಿಳಿಸಿದಲ್ಲಿ,ಅಂತವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ.ಬಾಲ ಕಾರ್ಮಿಕರನ್ನು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ,ಕೆಪಿಎಸ್ ಶಾಲೆ ಪ್ರಾಂಶುಪಾಲ ಬಸವರಾಜ ಕೊಡೇಕಲ್,ಬಿಇಓ ಯಲ್ಲಪ್ಪ ಕಾಡ್ಲೂರ್ ಮಾತನಾಡಿದರು.ವೇದಿಕೆಯಲ್ಲಿ ಸರಕಾರಿ ಸಹಾಯಕ ಅಭಿಯೋಜಕರಾದ ಮರೇಪ್ಪ ಹೊಸಮನಿ,ಸುರೇಶ ಪಾಟೀಲ್,ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ,ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಮಂಗಿಹಾಳ,ವಕೀಲರಾದ ನಂದಕುಮಾರ ಕನ್ನೆಳ್ಳಿ,ಮಂಜುನಾಥ ಹುದ್ದಾರ, ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರ್,ಕಾರ್ಮಿಕ ನಿರೀಕ್ಷಕ ಶಿವರಾಜ ಉಪ ಸ್ಥಿತರಿದ್ದರು.ಶಿಕ್ಷಕ ರಾಜಶೇಖರ ಹುಟಗೂರ ನಿರೂಪಿಸಿ,ಸ್ವಾಗತಿಸಿ,ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here