ಕಲಬುರಗಿ – ಪುರಾಣ ಪ್ರವಚನ, ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಖ್ಯಾತ ಉದ್ದಿಮೆದಾರರಾದ ಚಂದ್ರಶೇಖರ್ ಮಡಿವಾಳ ಖಾಜಾ ಕೋಟನೂರ್ ಅವರು ಹೇಳಿದರು.
ಅವರು ನಗರದ ಗಂಗಾನಗರದಲ್ಲಿ ಹಮ್ಮಿಕೊಂಡ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಕೇಳುವುದರಿಂದ ನಮಗೆ ಬಂದಂತ ಕಷ್ಟಗಳು ದೂರವಾಗುತ್ತವೆ ತಾಯಿಯ ಆಶೀರ್ವಾದ ಸದಾ ಭಕ್ತರ ಮೇಲೆ ಇರಲಿ ಎಂದು ಹೇಳಿದರು.
20ನೆಯ ದಿನದ ಪುರಾಣ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿರುಪಾಕ್ಷಪ್ಪ ವಾಗ್ದುರಗಿ ನೆರವೇರಿಸಿ ದರು, ಶರಣಪ್ಪ ಹುಳಿಗೇರಿ, ಭೀಮಣ್ಣ ಹಾವನೂರ್, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪುರಾಣವನ್ನು ವೇದಮೂರ್ತಿ ಪಂಡಿತ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ್ ಸುಂಟನೂರ , ನಡೆಸಿಕೊಟ್ಟರು, ಬಾಬುರಾವ ಕೋಬಾಳ್, ಸಂಗೀತ ಸೇವೆ ನೀಡಿದರು.
ಕಾರ್ಯಕ್ರಮದಲ್ಲಿ ಅಮೃತ ಎಚ್. ಡಿಗ್ಗಿ, ಶರಣು ಎಸ್, ಕೌಲಾಗಿ. ಶ್ರೀನಾಥ್ ಕೋಬಾಳ್, ಶಿವಲಿಂಗ ಮರತೂರ್, ರಾಮ್ ಕೋಬಾಳ್, ಗಣೇಶ್ ರಡ್ಡಿ, ಅಶೋಕ ಪೂಜಾರಿ, ಶ್ರೀಕಾಂತ್ ಆಲೂರ್, ಮುಂತಾದವರು ಇದ್ದರು.