ಸುರಪುರ ನಗರಸಭೆ ಅಧ್ಯಕ್ಷರಾಗಿ ಹೀನಾಕೌಸರ್, ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ ಆಯ್ಕೆ

0
31

ಸುರಪುರ: ಇಲ್ಲಿಯ ನಗರಸಭೆಯ ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಹೀನಾ ಕೌಸರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ(ತಾತಾ)ಅವರು 17 ಮತಗಳು ಪಡೆದರೆ ವಿಷ್ಣು ಗುತ್ತೇದಾರ್ ಅವರಿಗೆ 12 ಮತಗಳು ಪಡೆದರು.ರಾಜಾ ಪಿಡ್ಡನಾಯಕ ತಾತಾ ಅವರು 5 ಮತಗಳಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಅವರು ತಿಳಿಸಿದರು.

ಅಧ್ಯಕ್ಷ ಸ್ಥಾನ ಬಿಸಿಎ ( ಮಹಿಳೆ) ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಗದಿ ಪಡಿಸಿ ಲಾಗಿತ್ತು. ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಹೀನಾಕೌಸರ್ ಅವರು ನಾಮಪತ್ರ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಜಾ ಪಿಡ್ಡನಾಯಕ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ವಿಷ್ಣು ಗುತ್ತೇದಾರ್ ಅವರು ನಾಮಪತ್ರ ಸಲ್ಲಿಸಿದ್ದರು.ಸುರಪುರದ ವಾರ್ಡ ನಂ.12 ಖುರೇಷಿ ಮೋಹಲ್ ದ ಹೀನಾಕೌಸರ್ ಶಕೀಲ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

Contact Your\'s Advertisement; 9902492681

ಸುರಪುರದ ವಾರ್ಡ್ ನಂಬರ್ 5 ಉಪ್ಪಾರ ಮೊಹಲ್ಲಾದ ರಾಜಾ ಪಿಡ್ಡನಾಯಕ ಲಚಮಪ್ಪ ನಾಯಕ ಅವರು ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು. ಚುನಾವಣಾಧಿಕಾರಿ ಸಹಾಯಕ ಆಯುಕ್ತ ಡಾ.ಪಂಪಣ್ಣ ಸಜ್ಜನ್ ಕಾರ್ಯನಿರ್ವಹಿಸಿದರು.ಪೌರಾಯುಕ್ತ ಜೀವನ ಕಟ್ಟಿಮನಿ ಉಪಸ್ಥಿತರಿದ್ದರು.

ಎರಡನೇಯ ಅವಧಿಗೆ ನಡೆದ ಅಧ್ಯಕ್ಷೆ ಸ್ಥಾನ ಬಿಸಿಎ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಹಿಂದುಳಿದ ವರ್ಗ ಮಹಿಳೆ ಇಲ್ಲದ ಕಾರಣ ಯಾರು ನಾಮಪತ್ರ ಸಲ್ಲಿಸಿರಲಿಲ್ಲ ಕಾಂಗ್ರೆಸ್ ನಿಂದ ನೂರಜಾಹಾ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 14 ಜನ ಸದಸ್ಯರು ಹಾಗೂ ರಾಯಚೂರು ಸಂಸದ ಜಿ.ರಾಜಾ ಕುಮಾರ ನಾಯಕ, ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯಾಗುವ ಮೂಲಕ ನಗರಸಭೆ ಕಾಂಗ್ರೆಸ್ ಮಡಿಲಿಗೆ ಬಂದಿದೆ.

ಈ ಸಂದರ್ಭದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ,ನೂತನ ಅಧ್ಯಕ್ಷ ಉಪಾಧ್ಯಕ್ಷರು ಸುರಪುರ ಅಭಿವೃಧ್ಧಿಗೆ ಶ್ರಮಿಸಬೇಕು,ನಾನು ಕೂಡ ಬೇಕಾದ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.ಸಂಸದ ಜಿ.ಕುಮಾರ ನಾಯಕ ಅವರು ಮಾತನಾಡಿ,ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭವಾಗಲಿ,ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಅಭಿವೃಧ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ನಗರಸಭೆ ಸದಸ್ಯರಾದ ಜುಮ್ಮಣ್ಣ ಕೆಂಗೂರಿ, ನಾಸೀರ್ ಕುಂಡಾಲೆ,ಖಮುರಲ್ ನಾರಾಯಣಪೇಠ್, ಅಹ್ಮದ್ ಶರೀಪ್, ಮೆಹಬೂಬ್,ಚೆನ್ನಮ್ಮ ಮಡಿವಾಳ,ಸುವರ್ಣ ಎಲಿಗಾರ,ಲಕ್ಷ್ಮೀ ಬಿಲ್ಲವ, ಪಾರ್ವತಿ ಹಾದಿಮನಿ, ಸಿದ್ದಲಿಂಗಮ್ಮ ಹಸನಾಪುರ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ,ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ರಾದ ಅಬ್ದುಲ್ ಗಫೂರ್ ನಗನೂರಿ, ಮಹಿಬೂಬ ವಂಟಿ,ರಾಜಾ ಕುಮಾರ ನಾಯಕ,ರಾಜಾ ಸಂತೋಷ ನಾಯಕ, ಭೀಮರಾಯ ಮೂಲಿಮನಿ,ರಮೇಶ್ ದೊರೆ,ಭೀಮು ನಾಯಕ ಮಲ್ಲಿಭಾವಿ, ನಾಸೀರ್ ಕುಂಡಾಲೆ, ಖಮುರಲ್ ನಾರಾಯಣಪೇಠ್, ಮಲ್ಕಪ್ಪಗೌಡ ಹಸನಾಪುರ, ರಾಘವೇಂದ್ರ ಗೆದ್ದಲಮರಿ ಸೇರಿದಂತೆ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here