ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನದ ಕರಪತ್ರ ಬಿಡುಗಡೆ

0
100

ಶಹಾಬಾದ:ಕಲಬುರಗಿಯಲ್ಲಿ ಸೆಪ್ಟೆಂಬರ್ 29 ಹಾಗೂ 30ರಂದು ನಡೆಯುವ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನದ ಕರಪತ್ರವನ್ನು ಕರ್ನಾಟಕ ಪ್ರಾಂತ ರೈತ ಸಂಘದಿಂದ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಎಮ್.ಮ್.ಬಿ.ಸಜ್ಜನ್, ದೇಶಕ್ಕೆ ಅನ್ನ ನೀಡುವ ರೈತನ ಒಡಲು ಬರಿದಾಗಿದೆ ಬತ್ತಿದ ಎದೆಯಲ್ಲಿ ಬಿತ್ತಿದ ಬೀಜಗಳು ಫಲ ನೀಡದೆ.ದುಃಖಿಸುವ ಕಣ್ಣುಗಳಲ್ಲಿ ನೀರು ಸಹ ಬತ್ತಿ ಹೋಗಿದೆ. ಕೃಷಿ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಕಣ್ಮರೆಯಾಗಿ ಶಾಪವಾಗಿ ಪರಿಣಮಿಸಿದೆ.

Contact Your\'s Advertisement; 9902492681

ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಬ್ಬು ಬೆಳೆದು ರಾಜ್ಯದ 72 ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಾರೆ ಆದರೆ ಸಕ್ಕರೆ ಕಂಪನಿ ಮಾಲೀಕರು ಕಬ್ಬಿನ ಜೊತೆ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ. ಒಂದು ಟನ್ ಕಬ್ಬು ಬೆಳೆಯಲು ರಾಜ್ಯದ ಕೃಷಿ ಬೆಲೆ ಆಯೋಗದ ಪ್ರಕಾರ3580 ಖರ್ಚು ಬರುತ್ತದೆ. ಡಾಕ್ಟರ್ ಸ್ವಾಮಿನಾಥನ್ ವರದಿ ಪ್ರಕಾರ ಖರ್ಚಿನ ಜೊತೆಗೆ ಶೇಕಡ 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ 5,370 ರೂಗಳನ್ನು ಬೆಲೆ ನಿಗದಿಪಡಿಸಬೇಕು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳಲ್ಲಿ ಸಕ್ಕರೆ ಉದ್ಯಮಪತಿಗಳು ಮೇಲುಗೈ ಸಾಧಿಸಿರುವಾಗ ಕೇಂದ್ರ ಸರ್ಕಾರ ಶೇ.10.25 ಇಳುವರಿಗೆ ಕೇವಲ ರೂ.3,400 ರೂ.. ಕನಿಷ್ಠ ಶೇ.9.5 ಇಳುವರಿಗೆ 3,150ರೂಗಳ ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರಕ್ಕೆ ಉಪ ಉತ್ಪನ್ನಗಳ ಲಾಭಾಂತದ ಆಧಾರದಲ್ಲಿ ರಾಜ್ಯ ಸಲಹಾ ಬೆಲೆ ನಿಗದಿಪಡಿಸಲು ಮುಕ್ತ ಅವಕಾಶವಿದೆ.

ಈ ಅವಕಾಶವನ್ನ ಬಳಸಿಕೊಂಡ ರಾಜ್ಯಗಳಾದ ಹರಿಯಾಣ400. ಪಂಜಾಬ್ 900. ತಮಿಳುನಾಡು 250 ರೂ. ಗಳನ್ನು ಎಫ್.ಆರ್.ಪಿ ಬೆಲೆ ಜೊತೆಗೆ ಎಸ್.ಎ.ಪಿ. ಯಂತ ನೀಡುತ್ತಿವೆ. ಕರ್ನಾಟಕ ರಾಜ್ಯ ಸರ್ಕಾರ 2022- 2023ರಲ್ಲಿ ಎಥೆನಾಲ್ ಉತ್ಪಾದಿಸುವ ಕಂಪನಿಗಳು ಇಳುವರಿ ಪರೀಕ್ಷೆ ಮಾಡುವಲ್ಲಿ ಮತ್ತು ತೂಕದಲ್ಲಿ ಮೋಸ ಕಂಡು ಬರುತ್ತಿದೆ. ಆದ್ದರಿಂದ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಪಾರದರ್ಶಕತೆ ಕಾಪಾಡಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು.

ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಕಲಬುರ್ಗಿಯಲ್ಲಿ ಹೋರಾಟ ನಡೆಸಿ ಹೆಚ್ಚುವರಿ ಕಟಾವು ಮತ್ತು ಸಾಗಾಣಿಕೆ ವೆಚ್ಚದ ಹಣವನ್ನು ವಾಪಸ್ಸು ಕೊಡಿಸಲು ಸಾಧ್ಯವಾಗಿದೆ. ಇನ್ನೂ ಕೊಡಿಸಬೇಕಿದೆ. ರೈತರು ಕಷ್ಟಪಟ್ಟು ಬೆಳೆದ ಕಬ್ಬನ್ನ 15 ರಿಂದ 16 ತಿಂಗಳಾದರೂ ಕಟಾವು ಮಾಡದೆ ಹಾಗೂ ಕಟಾವು ಆದ 12 ಸಂಟೆಯೊಳಗೆ ಆನ್ ಲೋಡ್ ಮಾಡದೆ ವಿನಾಕಾರಣ ಕಬ್ಬನ್ನು ಒಣಗಿಸುತ್ತಾರೆ. ಅಲ್ಲದೆ ಸರಬರಾಜು ಮಾಡಿದ 14 ದಿನದೊಳಗೆ ಹಣವಾವತಿ ಮಾಡದೆ ವಿಳಂಬ ಮಾಡುತ್ತಾರೆ.

ಮುಂತಾದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯಮಟ್ಟದಲ್ಲಿ ಕರ್ನಾಟಕ ಕಬ್ಬು ಬೆಳೆಗಾರ ಸಂಘವನ್ನು ಅಖಿಲ ಭಾರತÀ ಕಬ್ಬು ಬೆಳೆಗಾರರ ಸಂಘದ ಮಾರ್ಗದರ್ಶನದಲ್ಲಿ ಬಲಿಷ್ಠವಾಗಿ ಕಟ್ಟಿ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಮುಂದೆ ಹಜ್ಜೆ ಇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ರಂದು ರಾಜ್ಯ ಸಮ್ಮೇಳನ ಮತ್ತು ಸೆಪ್ಟೆಂಬರ್ 30ರಂದು ಅಖಿಲ ಭಾರತ ಕಟ್ಟು ಬೆಳೆಗಾರದ ಸಂಘದ ರಾಷ್ಟ್ರೀಯ ಸಮಿತಿ ಸಭೆಯು ಜರುಗಲಿದೆ.

ಈ ಕಾರ್ಯಕ್ರಮಗಳಿಗೆ ವಿವಿಧ ರಾಜ್ಯಗಳಿಂದ ರಾಷ್ಟ್ರಮಟ್ಟದ ಕಬ್ಬು ಬೆಳೆಗಾರರ ಮುಖಂಡರು ಹಾಗೂ ಕೃಷಿ ತಜ್ಞರು ಭಾಗವಹಿಸಲಿದ್ದಾರೆ. ಆದ್ದರಿಂದ ಇದರ ಯಶಸ್ಸಿಗೆ ಎಲ್ಲಾ ರೀತಿಯ ಸಲಹೆ ಸಹಕಾರ ನೀಡಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ,ದಿಲೀಪ್ ನಾಗೂರೆ,ನಾಗಪ್ಪ ರಾಯಚೂರಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here