ವಿಶ್ವಶಾಂತಿ ದಿನದ ನಿಮಿತ್ತ ವಾಕ್ ಎ ಥಾನ್: ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗಿ

0
53

ಕಲಬುರಗಿ: ನಗರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ಜಿಲ್ಲಾ ಶಾಖೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ YRC ಘಟಕದ ವತಿಯಿಂದ ವಿಶ್ವಶಾಂತಿ ದಿನದ ಅಂಗವಾಗಿ ಮಾನವೀಯತೆಗಾಗಿ ನಡಿಗೆ (ವಾಕ್ ಎ ಥಾನ) ಇಂದು ಬೆಳಿಗ್ಗೆ 9 ಗಂಟೆಗೆ ಜಗತ್ ವೃತ್ತದಲ್ಲಿ  ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ದಯಾನಂದ ಅಗಸರ ಚಾಲನೆ ನೀಡಿದರು.

ಮಾನವೀಯತೆಗಾಗಿ ನಡಿಗೆಯ ಜಗತ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಸರಿಸುಮಾರು 2,000 ವಿದ್ಯಾರ್ಥಿಗಳು ವಾಕ್ ಎ ಥಾನ್ ನಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ವಿದ್ಯಾರ್ಥಿಗಳು ಜೀವ ಉಳಿಸಿ ರಕ್ತದಾನ ಮಾಡಿ, ವಿಶ್ವಶಾಂತಿ ಗಾಗಿ, ಮಾನವೀತೆಗಾಗಿ ರಕ್ತದಾನ ಮಾಡಿ ಘೋಷಣೆಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಅಪ್ಪಾರಾವ ಅಕ್ಕೋಣೆ MC ಸದಸ್ಯರು IRCS ಕರ್ನಾಟಕ ರಾಜ್ಯ ಶಾಖೆ ಬೆಂಗಳೂರು, ಅರುಣಕುಮಾರ್ ಲೋಯಾ ಅಧ್ಯಕ್ಷರು IRCS ಕಲ್ಬುರ್ಗಿ ಜಿಲ್ಲಾ ಶಾಖೆ, ಡಾ. ಪದ್ಮರಾಜ್ ರಾಷಣಗಿ ಜಿಲ್ಲಾ ಯೂತ್ ರೆಡ್ ಕ್ರಾಸ್ ಜಿಲ್ಲಾ ಸಂಯೋಜಕರು ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಅಧ್ಯಾಪಕರು,ಮುಖ್ಯ ಅತಿಥಿಗಳಾಗಿ ಭಾಗ್ಯಲಕ್ಷ್ಮಿ M ಉಪಾಧ್ಯಕ್ಷರು IRCS, G.S ಪದ್ಮಾಜಿ ಖಜಾಂಚಿ IRCS ಕಲ್ಬುರ್ಗಿ ಶಾಖೆ, ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here