ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತನಿಖೆ ನಡೆಸಲು ಸಂಗಾವಿ ಆಗ್ರಹ

0
36

ಕಲಬುರಗಿ: ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ನಾಯ್ಡು ಇವರು ಗುತ್ತಿಗೆದಾದ ಚಲುವರಾಜ ಇವರನ್ನು ಲಂಚಕ್ಕಾಗಿ ಪೀಡಿಸಿ ದಲಿತರ ಜಾತಿಗಳಾದ ಹೊಲಿಯ, ಮಾದಿಗ ಎಂಬ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿರುವುದು ಅತ್ಯಂತ ಅಸಹ್ಯಕರ ಬೆಳವಣಿಗೆಯಾಗಿರುತ್ತದೆ. ಒಕ್ಕಲಿಗರ ಹೆಣ್ಣುಮಕ್ಕಳ ಬಗ್ಗೆಯು ಅಶ್ಲೀಲ ಮತ್ತು ಅಸಭ್ಯ ಪದಗಳನ್ನು ಉಪಯೋಗಿಸಿ ಮಾತನಾಡಿದ್ದು ನಮ್ಮ ರಾಜ್ಯದ ಮತ್ತು ದೇಶದ ಜನತೆಗೆ ಅಸಮಾನ ಮಾಡಿದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ಅವರು ಹೇಳಿದರು.

ಈಗಲೇ ಬಂಧನಕ್ಕೊಳಗಾಗಿರುವ ಮುನಿರತ್ನ ನಾಯ್ಡು ಜಾಮೀನಿನ ಮೇಲೆ ಹೊರ ಬಂದರೆ ಸಾಕ್ಷ್ಯನಾಶ ಮತ್ತು ವ್ಯಕ್ತಿಗಳ ಮೇಲೆ ಒತ್ತಡ ತಂದು ಕೇಸನ್ನು ತಲೆಕೆಳಗಾಗಿ ಮಾಡಬಹುದು ಆದ್ದರಿಂದ ದಲಿತರ ಮೇಲೆ ಈ ರೀತಿ ಜಾತಿ ನಿಂದನೆ ಪಗಳನ್ನು ಉಪಯೋಗಿಸಿ ಇಡೀ ದಲಿತ ಸಮಾಜಕ್ಕೆ ಅವಮಾನ ಕನಿಷ್ಠ ಮಾನವಿಯತೆಯನ್ನು ಇಟ್ಟುಕೊಳ್ಳದೆ ಈ ರೀತಿ ನಡೆದುಕೊಂಡಿರುವ ದುರದುಷ್ಟಕರ.

Contact Your\'s Advertisement; 9902492681

ಆದ್ದರಿಂದ ಮುನಿರತ್ನ ರವರನ್ನು ತನಿಖೆ ಮುಗಿಯುವ ವರೆಗೂ ದಲಿತ ಮೇಲೆ ದೌರ್ಜನ್ಯ ಕಾಯ್ದೆಯಡಿ ಜಾಮೀನು ರಹಿತ ಬಂಧನ ಮಾಡಿ ಇವರನ್ನು ವಿಧಾನಸಭೆಯ ಸ್ಪೀಕರ್ ರವರು ತಮಗೆ ಇರುವ ದತ್ತ ಅಧಿಕಾರವನ್ನು ಕಾಪಯೋಗಿಸಿ ಮುನಿರತ್ನರವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸ ಬೇಕಾಗಿ ಸಂಗಾವಿ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣರಾವ ತೊನಸಳ್ಳಿ, ತಿಪ್ಪಣ್ಣ ಒಡೆಯರಾಜ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here