ವಿವಿಯಲ್ಲಿ ಕನ್ಹಯ್ಯ ಕುಮಾರ್ ಕಾರ್ಯಕ್ರಮ ರದ್ದು: 144 ಜಾರಿ

0
185

ಕಲಬುರಗಿ: ಗುಲ್ಬರ್ಗಾ ವಿವಿ ಆವರಣದಲ್ಲಿ ಆಯೋಜಿಸಿದ್ದ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಅವರ ಕಾರ್ಯಕ್ರಮವನ್ನು ಮತ್ತೆ ದಿಢೀರ್ ರದ್ದು ಮಾಡಲಾಗಿದ್ದು, ವಿಶ್ವವಿದ್ಯಾಲಯ ಆವರಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

144 ಸೆಕ್ಷನ್​ ಜಾರಿಗೊಳಿಸಲಾಗಿದ ಸರ್ಕಾರದ ಈ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

“ಸಂವಿಧಾನದ ರಕ್ಷಣೆ ಯುವ ಜನತೆಯ ಹೊಣೆ” ವಿಷಯವಾಗಿ ಉಪನ್ಯಾಸ ಹಾಗೂ ಸಂವಾದ ನಡೆಯಬೇಕಿತ್ತು. ಆದರೆ, ವಿವಿ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳು ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿತ್ತು. ಪ್ರತಿಭಟನೆಗೆ ಮಣಿದ ವಿವಿ, ಸಿಂಡಿಕೇಟ್ ಸಭೆ ನಡೆಸಿ ಷರತ್ತು ವಿಧಿಸಿ ಅನುಮತಿ ನೀಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here