ಕಲಬುರಗಿ: ಮಸಿದಿ ಇಮಾಮ್, ಮೌಜನ್ ಹಾಗೂ ಉಲೇಮಾ ಎಕ್ರಾಮ್ ಅವರಿಗೆ ಪ್ರೋಟೆಕ್ಷನ್ ಆಕ್ಟ್, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸ ನಗರದ ವಕ್ಫ್ ಕಚೇರಿ ಎದುರು ಇಮಾಮ್ ಮತ್ತು ಮೌಜನ್ ಸಂಘಟನೆ, ಗುಲಬರ್ಗಾ ಸುನ್ನಿ ಇಮಾಮ್ ಸಂಸ್ಥೆ ಹಾಗೂ ಜನತಾ ಪರಿವಾರ ಜಂಟಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಗುರುವಾರ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಆವರಣದಲ್ಲಿ ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಮುಖಂಡರಾದ ಸಿರಾಜ್ ಶಹಾಬಾದಿ ಮಾತನಾಡಿ ಇಮಾಮ್ ಮತ್ತು ಮೌಜನ್ ಅವರ ವೇತನ ಹೆಚ್ಚಳ, ವಸತಿ ಸೌಲಭ್ಯ ಅಥವಾ ನಿವೇಶನ ಮತ್ತು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಗೆ ತರಬೇಕು ಮತ್ತು ಸೇವೆಯಲ್ಲಿದ್ದು ಮೃತಪಟ್ಟ ಪತ್ನಿಗೆ ಇಲಾಖೆಯಿಂದ ವಿಧವಾ ವೇತನ ಮಂಜುರು ಮಾಡಬೇಕೆಂದು ಅವರು ಆಗ್ರಹಿಸಿದರು.
ಮಸಿದಿಗಳಲ್ಲಿ ಇಮಾಮ್ ಮತ್ತು ಮೌಜನ್ ಗಳಿಗೆ ಭದ್ರತೆ ಇಲ್ಲ, ಮಸಿದಿ ಕಮಿಟಿಗಳು ನೇಮಕ ಮಾಡಿಕೊಂಡ ಕೆಲವೆ ದಿನಗಳಲ್ಲಿ ಅಮನಾತು ಮಾಡಿ ಅವರ ಕೆಲಸಕ್ಕೆ ಅಭದ್ರತೆ ತರುವ ಪ್ರಕರಣಗಳು ಹೆಚ್ಚುತ್ತಿವೆ. ವಕ್ಫ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿಯಮಗಳು ರೂಪಿಸಿ ವಕ್ಫ್ ಇಲಾಖೆಯಿಂದ ಅಮಾನತು ಪ್ರಕ್ರಿಯೆ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿಭಟನೆ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಮತ್ತು ಇಲಾಖೆಯ ಕಾರ್ಯದರ್ಶಿಗೆ ಜಿಲ್ಲಾ ವಕ್ಫ್ ಇಲಾಖೆಯ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಶೇಖ್ ಸೈಫನ್, ಅಬ್ದುಲ್ ಸಬಿರ್ ಗನಿ ಬಾರಿ, ಸೈಯದ್ ಹುಸೈನ್ ರಜ್ವಿ ಸಾಬ್ ಸೇರಿದಂತೆ ಮುಂತಾದವರು ಇದ್ದರು.