ಕಲಬುರಗಿ; ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮಕ್ಕೆಸಸಿಗೆ ನೀರೆರಚುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರೇವಣ್ಣ ಪಡೆ, ಶಿವಾನಂದ್ ಐಹೊಳೆ,ಬಸವರಾಜ್ ಶಿವನಿಗಿ ಗ್ರಾಮದ ಮುಖಂಡರು ಹಾಗೂ ಕಾರ್ಯಕ್ರಮದ ತರಬೇತಿ ಸಂಪನ್ಮೂಲ ವ್ಯಕ್ತಿ ಶಶಿಧರ್ ಬಳೆ, ಕೆ. ಎಸ್. ಬಡೇಗರ್, ದಯಾನಂದ ರಜಪೂತ್, ಕಾರ್ಯದರ್ಶಿ ಜೋಶಿ, ಕರ ವಸಲಿಗಾರರಾದ ಚಂದ್ರಕಾಂತ್ ದೊಡ್ಮನಿ ಸಂಕೇತಿಕ ಚಾಲನೆ ನೀಡಿದ್ದರು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ತರಬೇತಿ ಕಾರ್ಯಾಗಾರದಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ, ಬಾಲ್ಯ ವಿವಾಹ ,ಮುಟ್ಟಿನ ನೈರ್ಮಲ್ಯ ಹಾಗೂ ಕ್ಷಯ, ಮಾನಸಿಕ ಆರೋಗ್ಯ, ಮತ್ತು ಅ ಸಾಂಕ್ರಾಮಿಕರುಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಕಾರ್ಯಕ್ರಮದ ಅಚ್ಚುಕಟ್ಟಾದ ನಿರೂಪಣೆಯನ್ನು ಅಲ್ಲಿನ ಗ್ರಾಮ ಪಂಚಾಯಿತಿ ಚಂದ್ರಕಾಂತ್ ದೊಡ್ಮನಿ ಅವರು ನೆರವೇರಿಸಿದರು.