ವಾಡಿ: ಪಟ್ಟಣದ ಬಿಜೆಪಿ ಕಛೇರಿಗೆ ಆಗಮಿಸಿದ ಮಾಜಿ ಲೋಕಸಭಾ ಸದಸ್ಯ ಡಾ ಉಮೇಶ ಜಾಧವ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಅವರು ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಡಾ ಉಮೇಶ್ ಜಾಧವ ಮಾತನಾಡಿ ಸದಸ್ಯತ್ವಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ,
ಮುಂಬರುವ ಚುನಾವಣೆ ಗೆಲ್ಲಲು ಸದಸ್ಯತ್ವ ಸಂಖ್ಯೆ ಹೆಚ್ಚು ಮಾಡುವುದು ಅನಿವಾರ್ಯ ಎಂದರು.
ಲೋಕಸಭೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ ಒಂದು ಚುನಾವಣೆ ಮಸೂದೆಗೆ ಅನುಮೋದನೆ ನೀಡಿದ್ದರಂದ, ರಾಜಕೀಯದಲ್ಲಿ ಎಲ್ಲರಿಗೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲೇ ಚಿತ್ತಾಪುರ ತಾಲೂಕಿನಲ್ಲಿ ಹೆಚ್ಚು ಸದಸ್ಯತ್ವ ಮಾಡುವ ಗುರಿ ನಮ್ಮೆಲ್ಲರ ಮುಂದಿದೆ,ನಾನು ಸೋತರು ಗೆದ್ದರು ನಿಮ್ಮ ಜೊತೆ ಸದಾ ಇರುವೇ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮಾತನಾಡಿದರು.
ಈ ಸಂಧರ್ಭದಲ್ಲಿ ತಾಲ್ಲೂಕ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ,ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ,
ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮುಖಂಡರಾದ ವಿಠಲ ನಾಯಕ, ರಮೇಶ ಕಾರಬಾರಿ, ರಾಘವೇಂದ್ರ ಕುಲಕರ್ಣಿ, ಈಶ್ವರ ಬಾಳಿ,ಹರಿ ಗಲಾಂಡೆ,ತುಕಾರಾಮ ರಾಠೋಡ, ಶಿವಶಂಕರ ಕಾಶೆಟ್ಟಿ,ಕಿಶನ ನಾಯಕ,ಅಂಬದಾಸ ಜಾಧವ,ಮನೋಹರ ಚವ್ಹಾಣ, ಆನಂದ ಇಂಗಳಗಿ,ರಾಜು ಪವಾರ,ಮಹೇಂದ್ರ ಕುಮಾರ ಪುಜಾರಿ,ವಿನೋದ ಚವ್ಹಾಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.