ಕಲಬುರಗಿ: ಕರ್ನಾಟಕ ರಾಜ್ಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಯಲಗೊಂಡ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲಾ (ಎಸ್ಡಿಎಎ) ನೌಕರರ ಜಿಲ್ಲಾ ವಿಸ್ತೃತ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ದಿ ಸಂಘದ ನೂತನ ಜಿಲ್ಲಾ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಸವಿತಾ ಪಾಟೀಲ, ಜಿಲ್ಲಾ ಅಧ್ಯಕ್ಷರಾಗಿ ಶಿವಾನಂದ ಕವಲಗಾ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಮಲಕಯ್ಯ ಸ್ವಾಮಿ ಹಿರೇಮಠ, ಖಜಾಂಚಿಯಾಗಿ ಖಾಜಾ ಮೈನೋದ್ದೀನ (ಮುನ್ನಾ), ಮಹಿಳಾ ಪ್ರತಿನಿಧಿಯಾಗಿ ಸುನೀತಾ ಹೇಮನೂರ ಆಯ್ಕೆ ಮಾಡಲಾಯಿತು.
ಇನ್ನುಳಿದ ಹುದ್ದೆಗಳಿಗೆ ನಂತರದ ದಿನಗಳಲ್ಲಿ ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.