ಮಕ್ಕಳಲ್ಲಿ‌ ಮಾನವೀಯ ಮೌಲ್ಯ ಹೆಚ್ಚಿಸಲು ವಚನಗಳೇ ಸ್ಫೂರ್ತಿ

0
21

ಕಲಬುರಗಿ: ಶರಣರ ಅನುಬಾವಗಳಿಂದ ಹೊರ ಹೊಮ್ಮಿರುವ ವಚನಗಳು ಮಾನವೀಯ ಮೌಲ್ಯ ಹೆಚ್ಚಳಕ್ಕೆ ಪೂರಕವಾಗಿವೆ ಎಂದು ನಿವೃತ್ತ ಪ್ರಾಚಾರ್ಯರಾದ ಪ್ರೊ. ನಿಂಗಮ್ಮ ಪತಂಗೆ ಹೇಳಿದರು.

ನಗರದ ಸಮಾಧಾನದಲ್ಲಿ ಗುರುದೇವ ಸೇವಾ ಸಂಸ್ಥೆ ಹಾಗೂ ಚತುರಾ ಫೌಂಡೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಕಲಬುರಗಿ ಉತ್ತರ- ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಚನ ಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.

Contact Your\'s Advertisement; 9902492681

ನಾವಿಂದು ಆಧುನಿಕ ಕಾಲದಲ್ಲಿ ಶಿಕ್ಷಣವಂತರಾಗುತ್ತಿದ್ದೇವೆ.‌ ಆದರೆ ಸಂಸ್ಕಾರದಿಂದ ದೂರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ವಚನಗಳ ಸ್ಪರ್ಧೆ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.‌

ಸರ್ವಜ್ಞ, ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಅಕ್ಕ‌ಮಹಾದೇವಿ, ಮೌನಯೋಗಿ ಜಡೆಯೊಡೆಯ ತ್ರಿಪದಿಗಳು ಸೇರಿ ಅನೇಕ ಶರಣರ ವಚನಗಳನ್ನು ವಿದ್ಯಾರ್ಥಿಗಳನ್ನು ಪ್ರಸ್ತುತಪಡಿಸಿದರು. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಚನಗಳ ವಾಚನ ಮಾಡಿದರು.

ರವೀಂದ್ರನಾಥ ಭಂಟನಳ್ಳಿ, ಮಲ್ಲಿಕಾರ್ಜುನ ಬಗಲಿ ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ‌ ಎ.ಬಿ. ಪಾಟೀಲ್ ಬಮನಳ್ಳಿ ನಿರೂಪಿಸಿ, ವಂದಿಸಿದರು ಹಣಮಂತರಾವ ಭೈರಾಮಡಗಿ ಪ್ರಾಸ್ತಾವಿಕ ಮಾತನಾಡಿದರು. ಕುಮಾರಶೆಟ್ಟಿ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here