ನಾಡು ನುಡಿ ಸೇವೆ ಮಾಡುವ ಸಂಘದ ಕಾರ್ಯ ಅಮೋಘ; ತಹಸಿಲ್ದಾರ ಹುಸೇನಸಾಬ್

0
55

ಸುರಪುರ: ಕಳೆದ 82 ವರ್ಷಗಳಿಂದ ನಿರಂತರವಾಗಿ ನಾಡು ನುಡಿಯ ಸೇವೆ ಮಾಡುತ್ತಾ ನಾಡಹಬ್ಬ ಆಚರಣೆ ಮಾಡಿಕೊಂಡು ಬರುತ್ತಿರುವ ಈ ಕನ್ನಡ ಸಾಹಿತ್ಯ ಸಂಘದ ಸೇವೆ ತುಂಬಾ ಹೆಮ್ಮೆ ಮೂಡಿಸುತ್ತದೆ ಎಂದು ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ ನಾಡಹಬ್ಬದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಇಂತಹ ಕಾರ್ಯಕ್ರಮದಲ್ಲಿ ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಆಹ್ವಾನಿಸಿರುವುದು ತುಂಬಾ ಸಂತೋಷ ತಂದಿದೆ,ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಸಂಘದಿಂದ ನಡೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ ಮಾತನಾಡಿ ಕನ್ನಡ ನಾಡಿನಲ್ಲಿಯೇ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ ನಾಡು ನುಡಿಗಾಗಿ ಸಲ್ಲಿಸಿದ ಸೇವೆ ಅವಿಸ್ಮರಣಿಯವಾಗಿದೆ, ಈ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಎಂದೋ ಬರಬೇಕಿತ್ತು,ಆದರೆ ಸರಕಾರಗಳ ನಿರ್ಲಕ್ಷ್ಯ ದಿಂದ ಈಗ ಬಂದಿರುವುದು ಸಂತೋಷದ ಸಂಗತಿಯಾಗಿದೆ.ಬುದ್ಧಿವಂತ ಶೆಟ್ಟರ್ ಸೇರಿದಂತೆ ಎಲ್ಲ ಮಹನಿಯರು ಎಂಟು ದಶಕಗಳ ಹಿಂದೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಕಟ್ಟುವ ಕಾರ್ಯಕ್ಕೆ ಮುಂದಾಗಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಾನಪದ ಸಾಹಿತ್ಯದಲ್ಲಿ ಮಹಿಳೆ ಎಂಬ ವಿಷಯದ ಕುರಿತು ಶಿಕ್ಷಕಿ ಶಿವಲೀಲಾ ಮುರಾಳ ಮಾತನಾಡಿ,ಜಾನಪದ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ.ಮನೆಯಲ್ಲಿರುವ ಮಕ್ಕಳಿಗೆ ಪ್ರತಿ ತಾಯಿ ಜಾನಪದದ ಮೂಲಕ ಸಂಸ್ಕಾರವನ್ನು ಕಲಿಸುತ್ತಾಳೆ,ಆದರೆ ಇಂದು ಮಕ್ಕಳಲ್ಲಿ ಸಂಸ್ಕಾರ ಎನ್ನುವುದು ಕಡಿಮೆಯಾಗುತ್ತಿದೆ.ಮೋಬೈಲ್ ಟಿ.ವಿ ವ್ಯಾಮೋಹ ದಿಂದಾಗಿ ಮಕ್ಕಳು ಸಂಸ್ಕಾರದಿಂದ ದೂರಾಗುತ್ತಿದ್ದಾರೆ.ಅಲ್ಲದೆ ಹಿಂದಿನ ದಿನಗಳಲ್ಲಿ ಮಹಿಳೆ ಬೆಳಗಿನ ಜಾವದಲ್ಲಿ ಎದ್ದು ಬೀಸುವ ಕಲ್ಲಿನ ಮೂಲಕ ಜಾನಪದ ಹಾಡುತ್ತ ಬೀಸಿದ ಹಿಟ್ಟಿನಿಂದ ರೊಟ್ಟಿ ಮಾಡುತ್ತಿದ್ದರು.ಹಣೆಯ ಮೇಲೆ ವಿಭೂತಿ ಧರಿಸಿ ತಲೆಯ ಮೇಲೆ ಸೆರಗು ಹೊದ್ದು ಬರುತ್ತಿದ್ದರೆ ನೋಡಿದವರು ಕೈ ಮುಗಿಯುತ್ತಿದ್ದರು,ಆದರೆ ಇಂದು ಅಂತಹ ಸಂಸ್ಕಾರ ಕಡಿಮೆಯಾಗುತ್ತಿದೆ ಎಂದರು.

ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿದ್ದ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್,ಡಾ.ಶರಣು ಬಿ.ಗದ್ದುಗೆ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಮಕ್ಕಳಾದ ಮೇಘಾ,ಸ್ವಾತಿ ಹಾಗೂ ಯಶಸ್ವಿನಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.ಅಲ್ಲದೆ ಸಂಘದಿಂದ ನಡೆಸಲಾದ ರಂಗೋಲಿ,ಭಾಷಣ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಶರಣು ಬಿ.ಗದ್ದುಗೆ ಅವರು ಸಂಘದ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೂಗುರೇಶ ವಾರದ್ ಮಾತನಾಡಿದರು.ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಉಪಸ್ಥಿತರಿದ್ದರು.ಸಾಹಿತಿ ಪ್ರಕಾಶ ಅಲಬನೂರ ಸ್ವಾಗತಿಸಿದರು,ಉಪನ್ಯಾಸಕ ಘನಶ್ಯಾಮ ಪಾಣಿಭಾತೆ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಯಂಕಣ್ಣ ಗದ್ವಾಲ್,ಸೋಮರಾಯ ಶಖಾಪುರ,ಮುದ್ದಪ್ಪ ಅಪ್ಪಾಗೋಳ,ಶ್ರೀರಂಗ ಮಿರಿಯಾಲ,ರಮೇಶ ಶಹಾಪೂರಕರ್,ಮಹಾದೇವಪ್ಪ ಗುತ್ತೇದಾರ,ರವಿಕುಮಾರ ತ್ರಿವೇದಿ,ಸಿದ್ದಯ್ಯ ಪಾಟೀಲ್,ರಘುರಾಮ ಕಡಬೂರ,ಅರವಿಂದ ಬಿಲ್ಲವ್,ಮರೆಪ್ಪ ತೇಲ್ಕರ್,ಬಸವರಾಜ ಯರಸಂ,ಅಮರೇಶ ಜಾಲಹಳ್ಳಿ,ಸಂಗಮೇಶ ಗುಳಗಿ,ಗೋವಿಂದರಾಜ ಶಹಾಪುರಕರ್,ಶರಣಬಸವ ಅರಕೇರಿ,ಈರಣ್ಣ ಉಕ್ಕಲಿ,ರಾಮಭಟ್ಟ ರಾಜಜೋಷಿ,ಶಿಲ್ಪಾ ಆವಂಟಿ ಮಹಿಳಾ ಪದಾಧಿಕಾರಿಗಳಾದ ಮಾಧುರಿ ಕಲ್ಕೊಂಡ,ಪಾರ್ವತಿ ಚೆಟ್ಟಿ,ಗೀತಾ ಶಾಬಾದಿ,ಪದ್ಮಾಕ್ಷಿ ಶಹಾಪೂರಕರ್,ರಾಜೇಶ್ವರಿ ಗೋಲಗೇರಿ,ವಿನೋದಾ ರಾಜಜೋಷಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here