ವಾಡಿ: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹನುಮಾನ ಮಂದಿರದ ಹತ್ತಿರ ಬಿಜೆಪಿ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಾಚರಿಸಲಾಯಿತು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಹರಿಯಾಣದ ಪ್ರತಿ ಗ್ರಾಮಸ್ಥರು ಬಾರ ಬಾರ ಮೋದಿ ಎನ್ನುವುದು ಹ್ಯಾಟ್ರಿಕ್ ಗೆಲುವಿನ ಮೂಲಕ ಸಾಬೀತು ಪಡಿಸಿದ್ದಾರೆ.
ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಕ್ಷ ಗಳಿಸಿದೆ. ಕಳೆದ ಬಾರಿ ಬಹುಮತಕ್ಕೆ ಕೆಲ ಸ್ಥಾನಗಳ ಕೊರತೆ ಅನುಭವಿಸಿ ಜೆಜೆಎಂ ಜತೆ ಮೈತ್ರಿ ಸರ್ಕಾರ ಮಾಡಿದ್ದ ಬಿಜೆಪಿ ಈ ಬಾರಿ ಏಕಾಂಗಿಯಾಗಿಯೇ ಯಾರ ಜತೆಯೂ ಮೈತ್ರಿ ಮಾಡಿಕೊಳ್ಳದೆ ಬಹುಮತ ಗಳಿಸಿದೆ. ಈ ಫಲಿತಾಂಶ ಮುಂಬರುವ ಎಲ್ಲಾ ರಾಜ್ಯಗಳ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಮುಖಂಡರು ಪಕ್ಷದ ಧ್ವಜ ದೊಂದಿಗೆ ಜಯ ಘೋಷಕೊಗಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಕಾರ್ಯದರ್ಶಿ ಅರ್ಜುನ ದಹಿಹಂಡೆ,ಮುಖಂಡರಾದ ಅರ್ಜುನ ಕಾಳೆಕರ್,ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ,ಚಂದ್ರಶೇಖರ ಹಾವೇರಿ,ಮಲ್ಲಿಕಾರ್ಜುನ ಸಾತಖೇಡ,ಅಶೋಕ ರಾಠೋಡ,ವಿಶ್ವರಾಧ್ಯ ತಳವಾರ,ಬನಶಂಕರ ಮಟ್ಟೂರ,ಭಧ್ರಯ್ಯ ಸ್ವಾಮಿ, ನಾಗೇಶ ಸೇರಿದಂತೆ ಇತರರು ಇದ್ದರು.