ಶಹಾಬಾದ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಶಾಖೆಯ ನಿರ್ಧೇಶಕರ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ವಿವಿಧ ಇಲಾಖೆಯ ಸುಮಾರು 20 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚುನಾವಣಾಧಿಕಾರಿ ರಮೇಶ ಥಳಂಗೆ ಮತ್ತು ಸಹಾಯಕ ಚುನಾವಣಾಧಿಕಾರಿ ಹಾಜಪ್ಪ ತಿಳಿಸಿದ್ದಾರೆ.
ಸರಕಾರಿ ನೌಕರರ ಸಂಘದ ತಾಲೂಕಾ ಶಾಖೆಯ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಕ್ಟೋಬರ್ 18 ರಂದು ವಿವಿಧ ಇಲಾಖೆಯ ಸುಮಾರು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.ಅದರಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಲಿದೆ.ಆದರೆ ಉಳಿದ ಇಲಾಖೆ ವತಿಯಿಂದ ಪ್ರತಿಸ್ಪರ್ಧಿಯಾಗಿ ಯಾರು ನಾಮಪತ್ರ ಸಲ್ಲಿಸದಿರುವ ಕಾರಣ 27 ನಿರ್ದೇಶಕರ ಸ್ಥಾನದಲ್ಲಿ 20 ಅಭ್ರ್ಯರ್ಥಿಗಳು ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಇಲಾಖೆ -ಶಶಿಕಾಂತ ಭರಣಿ, ಪಶುಪಾಲನ ಮತ್ತು ವೈದ್ಯ ಸೇವಾ ಇಲಾಖೆ-ಡಾ.ನೀಲಪ್ಪ ಪಾಟೀಲ, ಡಾ. ಶಿವುಕುಮಾರ ಕಟ್ಟಿಮನಿ, ಕಂದಾಯ ಇಲಾಖೆ- ಮೋಹ್ಮದ್ ಮುನೀರ,ಮೋಹ್ಮದ್ ತಸ್ಲೀಂ ಅರೀಫ್,ಸೈಯಾದ ಮಜಹರ ಖಾದ್ರಿ, ಸರಕಾರಿ ಪದವಿ ಪೂವರ್À ಕಾಲೇಜುಗಳು ಮತ್ತು ಪದವಿ ಕಾಲೇಜು- ಜಗಪ್ಪ ಆರ್ ಹೊಸಮನಿ, ಅರಣ್ಯ ಇಲಾಖೆ – ಮಂಜುನಾಥ ಶರಣಪ್ಪ ಹಂದರಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ಸಂಜಯ ರಾಠೋಡ,ಮೋಹನ ಗಾಯಕವಾಡ ,ಯೂಸುಫ್ ನಾಕೆದಾರ , ನೀಲಾವತಿ ಮಡಿವಾಳ, ಉಪಖಜಾನೆ ಇಲಾಖೆ – ಪರಿಮಳ, ಭೂಮಾಪನ ಇಲಾಖೆ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ನೊಂದಣಿ ಮತ್ತು ಮುದ್ರಾಂಕಗಳ ಇಲಾಖೆ – ರವಿ ಕುಲಕರ್ಣಿ, ನ್ಯಾಯಾಂಗ ಇಲಾಖೆ – ಶ್ರೀಧರ, ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ ಇಲಾಖೆ- ಈರಪ್ಪಾ ಸಾಥಖೇಡ, ಕಾವೇರಿ ಗೋವಿಂದ, ಮಹಿಳಾ & ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ- ಶಕುಂತಲಾ ಸಾಕ್ರೆ, ಕಾರ್ಮಿಕ ವಿಮಾ ಆಸ್ಪತ್ರೆ- ವೆಂಕಟೇಶ.ಎನ್, ತಾಂತ್ರಿಕ ಶಿಕ್ಷಣ ಇಲಾಖೆ- ಅಣ್ಣಾರಾವ ಆಯ್ಕೆಯಾಗಿದ್ದಾರೆ.