ಜಮೀನುಗಳಲ್ಲಿ ಬಸಿಗಾಲುವೆ ಮಾಡಿ ನೀರನ್ನು ಹೊರಹಾಕಿ

0
36

ಶಹಾಬಾದ: ಕಳೆದ ಒಂದು ತಿಂಗಳಿನಿಂದ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ರೈತರು ಜಮೀನುಗಳಲ್ಲಿ ನೀರು ಆವರಿಸಿದೆ.ಅಲ್ಲದೇ ತಾಲೂಕಿನಲ್ಲಿ ಇನ್ನೂ ಮಳೆ ಬರುವ ಸಾಧ್ಯತೆ ಇದ್ದು ನೀರು ಆವರಿಸಿರುವ ಜಮೀನುಗಳಲ್ಲಿ ಬಸಿಗಾಲುವೆ ಮಾಡಿ ನೀರನ್ನು ಹೊರ ಹಾಕಬೇಕೆಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಸ್ಯ (ಬೆಳೆಯ) ಚೇತರಿಕೆಗಾಗಿ 19:19:19 ಸಮ ಪ್ರಮಾಣದ ಗೊಬ್ಬರ ಹಾಗೂ ಲಘು ಪೆÇೀಷಕಾಂಶಗಳು ದ್ರಾವಣ 10 ಎಮ್ ಎಲ್/ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಅಲ್ಲದೆ 2024- 25 ನೇ ಸಾಲಿನ ಹಿಂಗಾರು ಬಿತ್ತನೆ ಬೀಜಗಳಾದ ಕಡಲೆ 5 ಜಿ 11 ಮತ್ತು ಜೋಳ ಎಸ್‍ಪಿವಿ-2217 ಬೀಜಗಳು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ.ಕಡ್ಡಾಯವಾಗಿ ಎಲ್ಲಾ ರೈತ ಬಾಂಧವರು ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳಬೇಕು. ಅಲ್ಲದೆ 2024- 25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇಕಡ 90ರಷ್ಟು ರಿಯಾಯಿತಿ ದರದಲ್ಲಿ ತುಂತುರು (ಸ್ಪ್ರೀಂಕ್ಲರ್)ಮತ್ತು ಲಘು (ಡ್ರಿಪ್) ನೀರಾವರಿ ಘಟಕಗಳು ಲಭ್ಯವಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ ಹಾಗೂ ಆಸಕ್ತ ರೈತರು ಅರ್ಜಿ ಸಲ್ಲಿಸಿ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕಾಗಿ ರವೀಂದ್ರ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here