ಕಲಬುರಗಿ: ಹೈ.ಕ.ಶಿ. ಸಂಸ್ಥೆಯ ಎಂ. ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಕು. ಶಿವರಾಜ ತಂದೆ ಸಂತೋಷ ಕಾಮಾ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ, ವಿಶ್ವವಿದ್ಯಾಲಯದಿಂದ ರಾಜ್ಯ ಮಟ್ಟದ ಪ್ರೀ ಆರ್ ಡಿ ಪರೇಡ್ ಕ್ಯಾಂಪ ಗೆ ಆಯ್ಕೆಯಾಗಿದ್ದಾರೆ ಎಂದು ಎಂ ಎಸ್ ಐ ಕಾಲೇಜಿನ ಎನ್ ಎಸ್ ಎಸ್ ಸಂಯೋಜಕರಾದ ಡಾ. ಪ್ರಾಣೇಶ್ ಎಸ ಮತ್ತು ಡಾ. ಶಂಕ್ರಪ್ಪ ಕೆ ಇವರು ತಿಳಿಸಿದ್ದಾರೆ.
ಎಂಎಸ್ಐ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದನ್ನು ಎಚ್ ಕೆ ಇ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ ನಮೋಶಿ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಯ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂದಿನ ಗುರಿಸಾಧನೆಗೆ ಹಾರೈಸಿದ್ದಾರೆ.