ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಎಸ್.ಸಿ/ಎಸ್.ಟಿ. ಮಧ್ಯ ಮಾರಾಟಗಾರರ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಡಿ. ಗುಂಡಗುರ್ತಿ ಅವರು ಹೇಳಿದರು.
ಲಿಕ್ಕರ ಮಾರಾಟಗಾರರು 11 ರಂದು ಅಬಕಾರಿ ಇಲಾಖೆಯ ಸಚಿವರ ವಿರುದ್ಧ ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಡಾ: ಬಿ.ಆರ್.ಅಂಬೇಡ್ಕರ ಎಸ್.ಸಿ./ಎಸ್.ಟಿ. ಮಧ್ಯ ಮಾರಾಟಗಾರರ ಅಸೋಸಿಯೇಷನ್ ವತಿಯಿಂದ ಖಂಡಿಸುವುದರೊಂದಿಗೆ ಎಸ್.ಸಿ./ಎಸ್.ಟಿ. ಮಧ್ಯ ಮಾರಾಟಗಾರರು ಸದರಿ ಬಂದ ಕರೆಯಲ್ಲಿ ಭಾಗವಹಿಸದಂತೆ ಸಭೆಯಲ್ಲಿ ತೀರ್ಮಾನಿಸಿರುವುದರಿಂದ ಯಾವುದೇ ಎಸ್.ಸಿ./ಎಸ್.ಟಿ. ಮಧ್ಯ ಮಾರಾಟಗಾರರು ಬಂದ ಕರೆಯಲ್ಲಿ ಭಾಗವಹಿಸಬಾರದೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಜೀ ರವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಧ್ಯ ಮಾರಾಟಗಾರರಿಗೆ ಸಿ.ಎಲ್.7(ಡಿ) ಯೊಜನೆಯನ್ನು ತರುವುದರೊಂದಿಗೆ ಪರಿಶಿಷ್ಟ ಜಾತಿ ಮಧ್ಯ ಮಾರಾಟಗಾರರಿಗೆ ಬಹಳ ಅನುಕೂಲತೆ ಮಾಡಿಕೊಟ್ಟಂತಾಗಿರುತ್ತದೆ ಅಲ್ಲದೇ ಸರಕಾರದ ಬೊಕ್ಕಸಕ್ಕೂ ಕೂಡಾ ಆದಾಯ ತರುವಂತಾಗಿದೆ. ಆದಕಾರಣ, ಯಾವುದೇ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಧ್ಯ ಮಾರಾಟಗಾರರು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲ ನೀಡಬಾರದೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಯಾವುದೇ ಸರಕಾರವಿದ್ದರೂ ಕೂಡಾ ವರ್ಗಾವಣೆ ಮತ್ತು ಶಿಫ್ಟಿಂಗ್ ಮತ್ತು (ಸ್ಥಳಾಂತರ) ಮಾಡುವುದು ಸಾಮಾನ್ಯವಾಗಿದ್ದು, ಆದರೆ ಒಬ್ಬ ದಲಿತ ಅಬಕಾರಿ ಸಚಿವರ ಬಗ್ಗೆ ಯಾವುದೇ ದಾಖಲಾತಿ/ಸಾಕ್ಷಿ ಇಲ್ಲದೇ ವಿರೋಧಿಸುವುದರೊಂದಿಗೆ ಅಪಾದನೆ ಮಾಡಿ ಒಬ್ಬ ದಲಿತ ಸಚಿವರಿಗೆ ತೇಜೋವಧೆ ಮಾಡುತ್ತಿರುವ ಲಿಕ್ಕರ ಮಾರಾಟಗಾರರು ತೆಗೆದುಕೊಂಡ ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ನಿರ್ಣಯಕ್ಕೆ ಡಾ. ಬಿ.ಆರ್.ಅಂಬೇಡ್ಕರ ಎಸ್.ಸಿ./ಎಸ್.ಟಿ. ಮಧ್ಯ ಮಾರಾಟಗಾರರ ಅಸೋಸಿಯೇಷನ್ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಧ್ಯ ಮಾರಾಟ ವ್ಯಾಪಾರಸ್ಥರು ಉಗ್ರವಾಗಿ ಖಂಡಿಸುವುದರೊಂದಿಗೆ ಬಂದ ಕರೆಯಲ್ಲಿ ಭಾಗವಹಿಸದಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಪ್ರ ಕಾರ್ಯದರ್ಶಿ ಗೋಪಿಕೃಷ್ಣ ಗುಡೇನವರ, ಉಪಾಧ್ಯಕ್ಷ ವಿಜಯಕುಮಾರ ಕವಡ್ಯಾಳ, ಕಾರ್ಯದರ್ಶಿ ಗೋಪಾಲರಾವ ಕಟ್ಟಿಮನಿ ಇದ್ದರು.