ವಾಡಿ ರೈಲು ನಿಲ್ದಾಣಕ್ಕೆ ಅಂಬೇಡ್ಕರ ಹೆಸರಿಡಲು ಆಗ್ರಹ

0
89

ವಾಡಿ: ಪಟ್ಟಣದ ರೈಲು ನಿಲ್ದಾಣಕ್ಕೆ ಡಾ ಅಂಬೇಡ್ಕರ್ ರೈಲು ನಿಲ್ದಾಣ ಎಂದು ನಾಮಕರಣ ಮಾಡುವಂತೆ ಕಾಂಗ್ರೆಸ್ ಬಿಜೆಪಿ ಹಾಗೂ ವಿವಿಧ ಸಂಘಟನೆಯ ಸ್ಥಳೀಯ ಮುಖಂಡರು ಕೇಂದ್ರೀಯ ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕರಿಗೆ ಆಗ್ರಹಿಸಿದರು.

ಮಂಗಳವಾರ ವಿಶೇಷ ರೈಲಿನ ಮೂಲಕ ವಾಡಿ ಪಟ್ಟಣದ ರೈಲು ನಿಲ್ದಾಣದ ಕಾಮಗಾರಿ ವೀಕ್ಷಣೆಗೆ ಬಂದ ಕೇಂದ್ರೀಯ ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕರಾದ ಧರ್ಮವೀರ ಮೀನಾ ಅವರಿಗೆ ಮನವಿ ಸಲ್ಲಿಸಿ ಬಾಬಾ ಸಾಹೇಬ ಡಾ.ಅಂಬೇಡ್ಕರ ಅವರು 1945 ಹಾಗೂ 1952 ರಲ್ಲಿ ಎರಡು ಸಲ ವಾಡಿ ಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಕೆಲವು ಗಂಟೆಗಳ ಕಾಲ ಇಲ್ಲಿ ತಂಗಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಹೈದರಾಬಾದ್ ಮತ್ತು ಚನೈಗೆ ತೆರಳುವಾಗ ವಾಡಿ ಮಾರ್ಗವಾಗಿಯೇ ಹೋಗಬೇಕಿತ್ತು. ಆದ್ದರಿಂದ, ವಿಶ್ವ ಕಂಡ ಮಹಾನ್ ಜ್ಞಾನಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ನೆನಪುಗಳು ಇಲ್ಲಿ ಇವೆ ಎಂದು ಕೇಂದ್ರೀಯ ರೈಲಗವೆ ಮುಂಬಯಿ ವಿಭಾಗದ ಮುಖ್ಯ ವ್ಯವಸ್ಥಾಪಕ ಧರ್ಮವೀರ ಮೀನಾ ಅವರಿಗೆ ಮನವರಿಕೆ ಮಾಡಿದ ಮುಖಂಡರು, ಅವರು ಈ ಪಟ್ಟಣಕ್ಕೆ ನೀಡಿದ ಎರಡು ಭೇಟಿಯ ಆ ಸವಿ ನೆನಪಿಗಾಗಿ ವಾಡಿ ರೈಲು ನಿಲ್ದಾಣಕ್ಕೆ ಡಾ.ಅಂಬೇಡ್ಕರ್ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಬಾಬು ಮಿಯಾ, ಅಮೃತ ಕೋಮಟೆ, ನಾಗೇಂದ್ರ ಜೈಗಂಗಾ, ನಾಸಿರ್ ಹುಸೇನ್, ಅರುಣ ಬರ್ಮಾ, ಅನೀಲ ಸಿಬೋ, ಬಿಜೆಪಿ ಮುಖಂಡರಾದ ವಿರಣ್ಣ ಯಾರಿ, ಬಸವರಾಜ ಪಂಚಾಳ, ರಮೇಶ ಕಾರಭಾರಿ, ರಾಜು ಮುಕ್ಕಣ್ಣ, ಗಿರಮಲ್ಲಕ್ಕ ಕಟ್ಟಿಮನಿ, ಆನಂದ ಇಂಗಳಗಿ, ಕರವೇ ಅಧ್ಯಕ್ಷ ಶಿವಕುಮಾರ ಗುತ್ತೇದಾರ, ಫಿರೋಜ್ ಖಾನ್ ಸೇರಿದಂತೆ ವಿವಿಧ ಸಂಘಟನೆಯ ಹಲವಾರು ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here