ಕಲಬುರಗಿ: ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಮಂಗಳವಾರ ಸಡೆದಿದ್ದು, ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಕೃಷಿ ಸಮಾಜದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ತಿಳಿಸಿರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಅಧಿಕಾರವಧಿಗೆ ಐದು ವರ್ಷದಗಳಿದ್ದು, ಅವಕಾಶ ಸಿಕ್ಕಾಗ ಉತ್ತಮ ಕೆಲಸ ಮಾಡುವ ಮೂಲಕ ಕೃಷಿಕ ಸಮುದಾಯದ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ನೂತನ ಸದಸ್ಯರು: ಚಿತ್ರಶೇಖರ ಸಿದ್ದಪ್ಪ, ಶಾಮರಾವ ಚಂದ್ರಶೇಖರ, ಸಂಜೀವ ಮಹಾಂತಗೌಡ, ಶರಣಪ್ಪ ರಾಮಣ್ಣ ತಳವಾರ, ದೊಡಪ್ಪಾ ಬಸವಣಪ್ಪಾ, ರಾಜಕುಮಾರ ಬಾಬುರಾವ, ಉಮಾಪತಿ ನಾಗಪ್ಪಾ ಪಾಟೀಲ್, ಸೂರ್ಯಕಾಂತ ಪಾಟೀಲ್, ಶಿವರಾಜ ಶಿವಶರಣಪ್ಪಾ, ಜಗದೀಶ ಕರಸಿದ್ದಪ್ಪಾ ಪಾಟೀಲ್, ಅಶೋಕ ಶ್ರೀಮಂತರಾವ, ಅಶೋಕ ಬಸವಂತರಾವ ಪಾಟೀಲ್, ಮಲ್ಲಿಕಾರ್ಜುನ ಗುರುಬಸಪ್ಪ ಗಂಗಾಣೆ, ಸಂಗಣಗೌಡ ಭದ್ರಪ್ಪಗೌಡ ಪಾಟೀಲ್, ಸಿದ್ರಾಮಪ್ಪ ಬಸವಂತರಾವ ಪಾಟೀಲ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.