ಪತ್ತಿನ ಸಹಕಾರ ಸಂಘಗಳ ಸದುಪಯೋಗಕ್ಕೆ: ಅಂಬಾರಾಯ ಅಷ್ಠಗಿ ಕರೆ

0
153

ಕಲಬುರಗಿ: ಹೆಚ್ಚಿನ ಬಡ್ಡಿಗೆ ಸಾಲ ನೀಡುವ ಸಾಹುಕಾರರಿಂದ ರೈತರನ್ನು ಅಥವಾ ತನ್ನ ಸದಸ್ಯರನ್ನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಪ್ರಮುಖ ಗುರಿಯನ್ನು ಸಹಕಾರ ಸಂಘಗಳು ಹೊಂದಿರುವ ಅಗತ್ಯವಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದರು.

ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ಹಮ್ಮಿಕೊಂಡ ಶಿವಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿ ಅವರು ಸಂಘದ ಎಲ್ಲರೂ ಸೇರಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಮತ್ತು ಇದರ ಸದುಪಯೋಗ ಪಡೆದುಕೊಳ್ಳಬೇಕೇಂದು ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಬಸಪ್ಪಾ ಪಾಟೀಲ್ ಅಷ್ಠಗಿ ಮಾತನಾಡಿ ಸಹಕಾರ ಸಂಘದ ಬಗ್ಗೆ ಸವಿವರವಾಗಿ ಹೇಳಿದರು. ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯಸಾನಿಧ್ಯ ಹಿರಿ ಸಾವಳಗಿಯ ಶಿವಲಿಂಗೇಶ್ವರ ಸಂಸ್ಥಾನ ಮಠದ ಗುರುನಾಥ ಮಹಾಸ್ವಾಮಿಗಳು ವಹಿಸಿದ್ದರು. ಕಲಬುರಗಿ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಗಮೇಶ ನಾಗನಳ್ಳಿ,ಜಗದೀಶ್ ಪಾಟೀಲ್ ಸಣ್ಣುರ್, ಶಾಂತಕುಮಾರ ಪಾಟೀಲ್ಸಂ ನಂದೂರ್, ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಮೂಲಗೆ, ರೇವಣಸಿದ್ದಪ್ಪಾ ಬುಳ್ಳಾ,ಸಿ ಎಸ್ ಮೂಲಗೆ,ಎಸ್ ಎಸ್ ಮೂಲಗೆ , ನೀಲಲೋಹಿತ ಮೂಲಗೆ, ವಿಠ್ಠಲ ಕಲಬುರಗಿ ಸಹಕಾರ ವಿಸ್ತೀರ್ಣಾಧಿಕಾರಿ ಪರಶುರಾಮ ಯಾದವ್, ವಿಠ್ಠಲ ತಿಪ್ಪಾ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here