ಸಾಹಿತಿ ಬೀರಣ್ಣರ ದಿ ಬಡ್ಸ್ ಇಂಗ್ಲೀಷ್ ಕವನ ಸಂಕಲನ ಲೋಕಾರ್ಪಣೆ

0
29

ಸುರಪುರ: ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ನಮ್ಮ ಮಾಧ್ಯಮವಾಗಿರಬೇಕು, ಆದರೆ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಕಲಿಯುವುದರ ಕಡೆಗೆ ಮಕ್ಕಳಲ್ಲಿ ಇಂಗ್ಲೀಷ್ ಕುರಿತು ಅನಗತ್ಯ ಭಯವನ್ನು ಹೋಗಲಾಡಿಸಲು ಶಿಕ್ಷಕರು ಯತ್ನಿಸಬೇಕು ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ರವಿವಾರದಂದು ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಹಾಗೂ ಲೇಖಕ ಬೀರಣ್ಣ ಬಿ.ಕೆ ವಿರಚಿತ “ದಿ ಬಡ್ಸ್ ಪುಸ್ತಕ ಇಂಗ್ಲೀಷ್ ಕವನ ಸಂಕಲನ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಇಂಗ್ಲೀಷ್ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಕಲಿಯಲೇಬೇಕಾದ ಅಗತ್ಯವಿದ್ದು, ನಮ್ಮ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ವಿಷಯದ ಬಗ್ಗೆ ಅಂಜಿಕೆ ಇದ್ದು, ನಿರಾಸಕ್ತಿ ತೋರಿಸುತ್ತಾರೆ ಇದನ್ನು ಹೋಗಲಾಡಿಸಲು ಪ್ರಾಥಮಿಕ ಹಂತದಲ್ಲಿಯೇ ಅವರಲ್ಲಿ ಇಂಗ್ಲೀಷ್ ಭಾಷೆಯ ಕಡೆಗೆ ಆಸಕ್ತಿ ಹೆಚ್ಚಿಸುವ ಮೂಲಕ ಭಯ ನಿವಾರಿಸಲು ಶಿಕ್ಷಕರು ಇಂತಹ ಪುಸ್ತಕಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಈಗಾಗಲೇ ಕನ್ನಡ ಭಾಷೆಯಲ್ಲಿ ಹಲವಾರು ಚುಟುಕುಗಳನ್ನು ರಚಿಸಿ ಜನರ ಮನಸ್ಸನ್ನು ಸೂರೆಗೊಂಡಿರುವ ನಿವೃತ್ತ ಶಿಕ್ಷಕ ಬೀರಣ್ಣ.ಬಿ.ಕೆ ಅವರು ಇಂಗ್ಲಿಷ್ ಭಾಷೆಯಲ್ಲಿ ಕವನ ಸಂಕಲನವನ್ನು ರಚಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

Contact Your\'s Advertisement; 9902492681

ಶಿಕ್ಷಕ ಅಲ್ತಾಫ್ ಜಹಾಂಗೀರ ಬೆಳಗಾವಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು, ಬಿ.ಇ.ಓ ನಾಗರತ್ನ ಓಲೇಕಾರ ಕಾರ್ಯಕ್ರಮ ಉದ್ಘಾಟಿಸಿದರು, ಶಿಕ್ಷಕ ಉಮೇಶ ನರಗುಂದ ಯರಗೋಳ ಪುಸ್ತಕ ಕುರಿತು ಪರಿಚಯಿಸಿದರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ನಿವೃತ್ತ ಪ್ರಾಚಾರ್ಯ ಬಸವರಾಜ ನಿಷ್ಠಿ ದೇಶಮುಖ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ಜಿ.ಎನ್.ರೋಡಲಬಂಡಾ, ಕೆ.ವೀರಪ್ಪ, ರತನ್‌ಸಿಂಗ್ ಠಾಕೂರ, ಖಾದರ ಪಟೇಲ, ಇತರರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ದೇವು ಹೆಬ್ಬಾಳ ನಿರೂಪಿಸಿದರು, ಶಿವಕುಮಾರ ಸ್ವಾಗತಿಸಿದರು ಹಾಗೂ ವೆಂಕಟೇಶಗೌಡ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here