ಮೈಸೂರು: ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗ್ರಾಮಾಂತರ ಅಧ್ಯಕ್ಷ ಜಾಕೀರ್ ಹುಸೇನ್ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಬಾಬುಜಗಜೀವನ ರಾವ್,ಕನಕದಾಸರು, ಬಸವಣ್ಣ ಹಾಗೂ ಇನ್ನೂ ಹಲವು ಮಹನೀಯರ ಪ್ರತಿಮೆ ಇದ್ದು, ಆದರೆ ರಾಜಕೀಯ ವಿದ್ಯೆ ಹಾಗೂ ನೌಕರಿಯಲ್ಲಿ ಪ್ರಾತಿನಿತ್ಯ ಒದಗಿಸಿ ಹಿಂದುಳಿದ ವರ್ಗಗಳ ಹರಿಕಾರ ಡಿ ದೇವರಾಜ್ ಅರಸು ಅವರ ಪ್ರತಿಮೆ ಇಂದಿಗೂ ನಿರ್ಮಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅದ್ದರಿಂದ ದೇವರಾಜ ಅರಸು ಅವರ ಪ್ರತಿಮೆಯನ್ನ ಮೈಸೂರಿನ ಹೃದಯಭಾಗದಲ್ಲಿ ನಿರ್ಮಾಣ ಮಾಡಬೇಕೆಂದು ವೇದಿಕೆಯ ಸದಸ್ಯರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಎ.ಆರ್ ಕಾಂತರಾಜು, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ವಿನೋದ್ ರಾಜ್, ಕನ್ನಡ ಹೋರಾಟಗಾರ ಡೈರಿ ವೆಂಕಟೇಶ್ ಸೇರಿ ಸದಸ್ಯರು ಮೈಸೂರಿನಲ್ಲಿ ಡಿ. ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.