ಓದುಗರ ವೇದಿಕೆಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯಹೈದರಾಬಾದ್ ಕರ್ನಾಟಕ ಕವಿ ಮಾರ್ಗ: ಕೆಂಪಂಗಿ ಕವಿ ಮೂಲಕ emedialine - November 25, 2019 0 81 Facebook Twitter Pinterest WhatsApp ಕೆಂಪಂಗಿ ಕವಿ **** ಭಂಡೆದ್ದ ಎದೆಯ ಬ್ಯಾನಿಗೆ ಕೆಂಡದಾಕ್ರೋಶ ನಿಮ್ಮ ಪೆನ್ನಿಗೆ ಸಿಡಿದೆದ್ದ ಅಕ್ಷರದ ಮುಲಾಮು ಅನ್ಯಾಯದ ಹುಣ್ಣಿಗೆ ಕೆಂಪಂಗಿಯೊಳಗೆ ಜ್ವಾಲೆ ತುಂಬಿದ ಹೃದಯದ ಗವಿ ಉರಿದು ಬೆಂದು ಬಳಲಿದವರನ್ನ ಬರೆದೆಚ್ಚರಿಸಿದ ರವಿ ಬಾರದ ಲೋಕ ಬಿಗಿದಪ್ಪಿದನಾ ಭಾವ ಲೋಕದ ಕವಿ ಕೆಂಪು ಬೇರು ಪಸರಿಸಿದ ಚಿತ್ತಾಪುರ, ವಾಡಿ, ಶಹಾಬಾದಿನ ಸಮಾಜವಾದಿಗಳ ನೆಲದ ಕುಡಿ ನೀವು ಶಾಲಾ ಪುಸ್ತಕದ ಪದ್ಯಗಳಿಂದ ಪರಿಚಯವಾದ ಸಾಹಿತ್ಯ ದಿಗ್ಗಜ ನೀವು ನಿಮ್ಮ ಸಾವಿಗೆ ಕಂಬನಿ ಹಾಕುತ್ತಿವೆ ಭಂಡಾಯ ಸಾಹಿತ್ಯದ ಬಳ್ಳಿಗಳು ಹೃದಯಾಘಾತ ಅನುಭವಿಸುತ್ತಿವೆ ಶೋಷಿತರ ಎದೆಯಾಳದ ನೋವುಗಳು…. -ಮಡಿವಾಳಪ್ಪ ಹೇರೂರ ವಾಡಿ (ಜಂಕ್ಷನ್) 9845238667